ದೇವನಹಳ್ಳಿ:- 2024ರ ಹೊಸ ವರ್ಷದಂದು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲವು ಪ್ರದೇಶಗಳಿಗೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಡಳಿತವು, 2024ರ ಅತಿಯಾದ ಸಂಭ್ರಮಕ್ಕೆ ಸ್ವಲ್ಪ ಬ್ರೇಕ್ ಹಾಕಿದೆ.
ಕೆಲವು ಕಡೆ ಜನ ಮೋಜು ಮಸ್ತಿ ಮಾಡಿ, ಕಾನೂನು ಸುವ್ಯವಸ್ಥೆಗೆ ದಕ್ಕೆ ಹಿನ್ನಲೆ, ಕೆಲವರು ಅತಿಯಾದ ಮೋಜು ಮಸ್ತಿಗೆ ಬಿದ್ದು ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳೊ ಸಾಧ್ಯತೆ ಹಿನ್ನಲೆ ಕ್ರಮವಹಿಸಲಾಗಿದೆ.
ನಿರ್ಬಂಧಿತ ಪ್ರದೇಶಗಳು:-
ನೆಲಮಂಗಲದ ಶಿವಗಂಗೆ ಬೆಟ್ಟ, ಸಿದ್ದರಬೆಟ್ಟ, ದೊಡ್ಡಬಳ್ಳಾಪುರದ ಮಾಕಳಿ ಬೆಟ್ಟದ ಟ್ರಕಿಂಗ್, ದೇವನಹಳ್ಳಿಯ ಆವತಿಬೆಟ್ಟ, ನಂದಿ ಬೆಟ್ಟದ ತಪ್ಪಲಿನಲ್ಲಿ ಮೋಜು ಮಸ್ತಿ ಮಾಡುವುದಕ್ಕೆ ನಿಷೇಧ ಮಾಡಲಾಗಿದೆ.
ಡಿಸೆಂಬರ್ 30ರಿಂದ ಜನವರಿ 1ರ ಮಧ್ಯರಾತ್ರಿವರೆಗೂ 3ದಿನ ನಿಷೇಧಾಜ್ಞೆ 144ಸೆಕ್ಷನ್ ಜಾರಿ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಆದೇಶ ಹೊರಡಿಸಿದ್ದಾರೆ.