ತುಮಕೂರು:- ಮನೆಯ ಹಂಡೆ ಒಲೆ ಒಳಗೆ ಅಡಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಸೀಬಿ ಅಗ್ರಹಾರದಲ್ಲಿ ಜರುಗಿದೆ. ನಿವಾಸಿ ರಮೇಶ್ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡ ಹಾವು ಎನ್ನಲಾಗಿದೆ.
ಮನೆ ಕಾಣಲ್ಲ ಅಂತ ಹೆಮ್ಮರವಾಗಿ ಬೆಳೆದಿದ್ದ ಹುಣಸೆ ಮರಕ್ಕೆ ವಿಷವಿಟ್ಟ ಕಿರಾತಕರು !
ಸುಮಾರು 4 ಅಡಿ ಉದ್ದದ ನಾಗರಹಾವನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದರು. ತಕ್ಷಣ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ ಕರೆಮಾಡಿ ಮಾಹಿತಿ ನೀಡಿದ್ದು ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ, ನಾಗರ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳ ರಕ್ಷಣೆ ಮಾಡಲು ವಾರ್ಕೊ ಸಂಸ್ಥೆಯ ಸಹಾಯವಾಣಿ 9964519576 ಕರೆ ಮಾಡಬಹುದು ಎಂದು ಉರಗ ತಜ್ಞ ಮನು ತಿಳಿಸಿದ್ದಾರೆ.