ಬೆಂಗಳೂರು: ತಡರಾತ್ರಿ 2 ಗಂಟೆಯವರೆಗೆ ಬಾರ್, ಪಬ್ ಮತ್ತು ರೆಸ್ಟೋರೆಂಟ್ಗಳ (Bar And Restaurant) ಓಪನ್ಗೆ ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘವು (Hotel Association) ಅಬಕಾರಿ ಸಚಿವರಿಗೆ ಮನವಿ ಮಾಡಿದೆ.
ಪಬ್, ಬಾರ್ & ರೆಸ್ಟೋರೆಂಟ್ ಲೈಸೆನ್ಸ್ ನವೀಕರಣಕ್ಕೆ ಆನ್ಲೈನ್ ಸಮಸ್ಯೆಯಾಗಿದೆ. ಹೆಚ್ಚುವರಿ ಶುಲ್ಕ ಕಟ್ಟಿದರೂ ಲೈಸೆನ್ಸ್ ನೀಡುತ್ತಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಆರೋಪಿಸಿದೆ.
https://ainlivenews.com/yatnal-insists-to-name-metro-stations-after-actor-shankar-nag-aparna/
ಅಲ್ಲದೇ ಅಬಕಾರಿ ಇಲಾಖೆಯಲ್ಲಿ (Excise Department) ಕಾನೂನು ತೊಡಕಿನ ಆರೋಪವನ್ನೂ ಹೋಟೆಲ್ ಅಸೋಸಿಯೇಷನ್ ಹೊರಿಸಿದೆ. ಕಾನೂನು ಸಬಲೀಕರಣ ಮಾಡದೆ ನಮಗೆ ನೋಟಿಸ್ ಕೊಟ್ಟು ಸಮಸ್ಯೆ ಮಾಡುತ್ತಿದ್ದಾರೆ. ನಗರದಲ್ಲಿ ತಡರಾತ್ರಿ 2 ಗಂಟೆವರೆಗೆ ಹೋಟೆಲ್, ಬಾರ್ & ರೆಸ್ಟೋರೆಂಟ್ ಓಪನ್ಗೆ ಅನುಮತಿ ನೀಡುವಂತೆ ಬೃಹತ್ ಬೆಂಗಳೂರು ಹೋಟೆಲ್ ಸಂಘಟನೆಗಳು ಅಬಕಾರಿ ಸಚಿವರಲ್ಲಿ ಮನವಿ ಮಾಡಿದೆ.