ಬೆಂಗಳೂರು: ಬೆಂಗಳೂರಿನ ಕೆಆರ್ ಪುರದ ಬಿ ನಾರಾಯಣಪುರದಲ್ಲಿ 76ನೇ ಗಣರಾಜ್ಯೋತ್ಸವದ ನಿಮಿತ್ತ ರಿಪಬ್ಲಿಕ್ ಡೇ ಕರ್ನಾಟಕ ಸ್ಟೇಟ್ ಬಾಕ್ಸಿಂಗ್ ಚಾಂಪಿಯನ್ಶಿಪ್ ಅನ್ನು ಆಯೋಜಿಸಲಾಗಿತ್ತು. ಎರಡು ದಿನಗಳ ಕಾಲ ನಡೆದ ಈ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದಲೂ 225ಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸಿ ರಣ ರೋಚಕವಾಗಿ ಕಾದಾಡಿದರು..
ರಾಜೇಶ್ , ಕಿಶೋನ್, ಅರುಣ್ ಹಾಗೂ ಜನಾರ್ಧನ್ ಅವರ ನೇತೃತ್ವದಲ್ಲಿ ನಡೆದ ಈ ಬಾಕ್ಸಿಂಗ್ ಸ್ಪರ್ಧೆಯು ನೋಡುಗರಿಗೆ ಮನರೋಚವಾಗಿತ್ತು.. ಬಳಿಕ ಮಾತನಾಡಿದ ಕರ್ನಾಟಕ ಅಮೇಚರ್ ಬಾಕ್ಸಿಂಗ್ ಅಸೋಸಿಯೇಷನ್ ಸಲಹೆಗಾರ ರಾಜ್ ಕುಮಾರ್ ಅವರು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನತೆ ಹೊಂದಿರುವ ಭಾರತ ದೇಶದಲ್ಲಿ ಬಾಕ್ಸಿಂಗ್ ಒಂದು ಫೋರ್ ಕ್ರೀಡೆ ಎಂಬ ಹಣೆಪಟ್ಟಿ ಇದ್ದು, ವಿದೇಶಗಳಲ್ಲಿ ಶ್ರೀಮಂತ ಕ್ರೀಡೆಯಾಗಿ ಗುರುತಿಸಿಕೊಂಡಿದೆ.
Periods: ಮಹಿಳೆಯರೇ ಗಮನಿಸಿ.. ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ..? ಇಲ್ಲಿದೆ ಮಾಹಿತಿ
ಬಾಕ್ಸಿಂಗ್ ನಲ್ಲಿ ಆಸಕ್ತಿ ಹೊಂದಿರುವವರಿಗೆ ಇಂತಹ ವೇದಿಕೆಗಳನ್ನು ಸೃಷ್ಟಿಸಿ, ಕಲಿಕೆಯ ಜೊತೆಗೆ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು… ಇನ್ನೂ ಇವೊಂದು ಬಾಕ್ಸಿಂಗ್ ಸ್ಪರ್ಧೆಗೆ ಬೆನ್ನೆಲುಬಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ ಮೋಹನ್ ಬಾಬು, ಡಿ.ಕೆ ರಮೇಶ್ ಹಾಗೂ ಸ್ಥಳೀಯರಾದ ಉಮಾಶಂಕರ್, ಕರ್ನಾಟಕ ರಸ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ಅವರು ಸಾಥ್ ನೀಡಿದರು..