ಬೆಂಗಳೂರು/ಬಳ್ಳಾರಿ: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಕರ್ನಾಟಕ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ಮಾಡುತ್ತಿವೆ. ಇದರ ಬೆನ್ನಲ್ಲೇ ಬಾಣಂತಿಯರ ಸಾವು ಕೇಸ್ ಗೆ ಸಂಬಧಪಟ್ಟಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಬಾಣಂತಿಯರಿಗೆ ನೀಡಿದ್ದ ಐವಿ ಫ್ಲೂಯಿಡ್ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಅದರ ವರದಿ ಅಧಿಕಾರಿಗಳ ಕೈ ಸೇರಿದೆ.
ಫ್ಲೂಯಿಡ್ನಲ್ಲಿ ಎಂಡೋ ಟಾಕ್ಸಿನ್ ಎಂಬ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. ಇದು ಸಾವಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾ ಎಂದು ಹೇಳಲಾಗುತ್ತದೆ. ಬಾಣಂತಿಯರಿಗೆ ಕೊಟ್ಟಿದ್ದ ಗ್ಲೂಕೋಸ್ ನಲ್ಲಿ ನ್ಯೂನತೆ ಕಂಡು ಬಂದಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸಲು ಗ್ಲೂಕೋಸ್ ಕಾರಣವಾಗಿದೆ.
ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚಾಗಲು ಕಾರಣವೇನು ಗೊತ್ತಾ..?
ಯೋಗ್ಯವಲ್ಲದ ಐವಿ ಫ್ಲೂಯಿಡ್ ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 3 ಬ್ಯಾಚ್ ಫ್ಲೂಯಿಡ್ ನಲ್ಲಿ 1 ಬ್ಯಾಚ್ ನ ವರದಿ ಇದೀಗ ಅಧಿಕಾರಿಗಳ ಕೈ ಸೇರಿದೆ. ಇನ್ನೂ ಎರಡು ಬ್ಯಾಚ್ ನ ವರದಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಬರಲಿದೆ. ಅದರಲ್ಲಿ ಏನೆಲ್ಲಾ ಮಾಹಿತಿ ಬರಲಿದೆ ಎನ್ನುವುದು ಕುತೂಹಲ ಹೆಚ್ಚಿಸಿದೆ.