ಚಿತ್ರದುರ್ಗ : ಹತ್ಯೆಗೊಳಗಾಗಿದ್ದ ರೇಣುಕಾಸ್ವಾಮಿ ಪುತ್ರನ ನಾಮಕರಣವು ಅದ್ದೂರಿಯಾಗಿ ನೆರೆವೇರಿತು. ಚಿತ್ರದುರ್ಗದ ವಿಆರ್ಡಸ್ ಬಡಾವಣೆಯ ನಿವಾಸದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನೆರೆವೇರಿತು. ರೇಣುಕಾಸ್ವಾಮಿ ಹತ್ಯೆಯಾಗಿದ್ದ ಸಮಯದಲ್ಲಿ ಅವರ ಪತ್ನಿ ಸಹನಾ 5 ತಿಂಗಳ ಗರ್ಭಿಣಿಯಾಗಿದ್ದರು. ಬಳಿಕ ಅವರಿಗೆ ಗಂಡು ಮಗುವಾಗಿತ್ತು. ಮಗನ ತದ್ರೂಪಿಯಾದ ಮೊಮ್ಮನಿಗೆ ಹೊತ್ತು ಮುದ್ದಾಡಿ ಕಾಶಿನಾಥ್ ಶಿವನ ಗೌಡ ಸಂಭ್ರಮಿಸಿದರು.
ಇದೀಗ ಮೊಮ್ಮಗನ ನಾಮಕರಣವನ್ನು ನೆರವೇರಿಸಿದ್ದು, ಜಂಗಮ ಸಂಪ್ರದಾಯದಂತೆ ಶಾಸ್ತ್ರ ನೆರವೇರಿಸಿದರು. ಕುಟುಂಬದ ಬಂಧುಗಳ ಸಮ್ಮುಖದಲ್ಲಿ ಮಗುವಿನ ನಾಮಕರಣ ಶಾಸ್ತ್ರ ನೆರವೇರಿದ್ದು, ರೇಣುಕಾಸ್ವಾಮಿ ಪುತ್ರನಿಗೆ `ಶಶಿಧರ್ ಸ್ವಾಮಿ’ ಎಂದು ರೇಣುಕಾಸ್ವಾಮಿ ಸಹೋದರಿ ಸುಚೇತ ಮಗುವಿಗೆ ಹೆಸರಿಟ್ಟರು.