ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಬಂಧನವಾಗಿ ಜೈಲಿನಲ್ಲಿರೋ ದರ್ಶನ್ ಅಂಡ್ ಗ್ಯಾಂಗ್ ಜಾಮೀನಿನ ಲೆಕ್ಕಾಚಾರದಲ್ಲಿದ್ದಾರೆ. ನಾಳೆ ಕೋರ್ಟ್ ನಲ್ಲಿ ಯಾವ ಆದೇಶದ ಬರುತ್ತೋ ಎನ್ನುವ ಟೆನ್ಷನ್ ನಲ್ಲೇ ಕಾಲ ಕಳಿತಿದೆ ಡಿ ಗ್ಯಾಂಗ್. ಹಾಗಾದ್ರೆ ಡಿ ಗ್ಯಾಂಗ್ ಯಾರಿಗೆಲ್ಲಾ ಜಾಮೀನು ಭವಿಷ್ಯದ ಚಿಂತೆ ಕಾಡ್ತಿದೆ.. ಬಳ್ಳಾರಿ ಜೈಲಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಳ್ಳದೆ ದರ್ಶನ್ ಮೊಂಡಾಟ ಮಾಡಿತಿರೋದು ಯಾಕೆ?
ಈ ಎಲ್ಲದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. ರೇಣುಕಾ ಸ್ವಾಮಿ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಚಡಪಡಿಕೆ ಹೆಚ್ಚಾಗಿದೆ. ನಾಲ್ಕ ತಿಂಗಳಿಂದ ಜೈಲಿನಲ್ಲಿರುವ ಆರೋಪಿಗಳಿಗೆ ಚಡಪಡಿಕೆ ಟೆನ್ಷನ್ ಎಲ್ಲಾ ಶುರುವಾಗಿದೆ.ಆರೋಪಿಗಳ ಜಾಮೀನು ಭವಿಷ್ಯ ನಾಳೆ ಹೊರಬೀಳಲಿದ್ದು, ಆರೋಪಿಗಳಿಗೆ ಡವ ಡವ ಶುರುವಾಗಿದೆ. ನಾಳೆ ಏನಾದ್ರು ಆರೋಪಿಗಳಿಗೆ ಜಾಮೀನು ಸಿಗದಿದ್ರೆ ರೇಣುಕಾಸ್ವಾಮಿ ಹತ್ಯೆ ಆರೋಪಿಗಳಿಗೆ ಮತ್ತಷ್ಟು ದಿನ ಜೈಲ್ ಗತಿಯಾಗುವು ಗ್ಯಾರಂಟಿ..
Non-veg Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ಆಂಧ್ರ ಸ್ಟೈಲ್ ಸ್ಪೆಷಲ್ ಚಿಕನ್ ಕರಿ!
ರೇಣುಕಾ ಸ್ವಾಮಿ ಕೇಸ್ ನಲ್ಲಿ ಬಂಧನವಾಗಿ ಜೈಲ್ ನಲ್ಲಿರುವ ದರ್ಶನ್ ಸೇರಿ ಆರು ಆರೋಪಿಗಳ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ನಾಳೆ ಸಿಟಿ ಸಿವಿಲ್ ಕೋರ್ಟ್ ನ ತೀರ್ಪಿನತ್ತ ಎಲ್ಲರ ಚಿತ್ತನೆಟ್ಟಿದೆ.ಆರೋಪಿಗಳ ಜಾಮೀನು ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. A1 ಪವಿತ್ರಾಗೌಡ, A2 ನಟ ದರ್ಶನ್, A8 ರವಿಶಂಕರ್,A11ನಾಗರಾಜ್,A12 ಲಕ್ಷ್ಮಣ್, A13 ದೀಪಕ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.ಈಗಾಗ್ಲೇ ದೀಪಕ್ ಮತ್ತು ರವಿಶಂಕರ್ ಗೆ ಜಾಮೀನು ನೀಡಬಹುದು ಎಂದು ಸ್ವತಃ ಎಸ್ ಪಿಪಿ ಪ್ರಸ್ತಾಪ ಮಾಡಿದ್ದಾರೆ. ಆದ್ರೆ ದರ್ಶನ್ ಸೇರಿ ನಾಲ್ವರ ಜಾಮೀನಿಗೆ ಎಸ್ ಪಿಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ನಾಳೆ ಬರುವ ಜಾಮೀನು ಆದೇಶ ಹೊರಬೀಳಲಿದ್ದು
ಎಲ್ಲಾರ ಚಿತ್ತ ಸಿಟಿ ಸಿವಿಲ್ ಕೋರ್ಟ್ ಹಾಲ್ 57 ರತ್ತ ನೆಟ್ಟಿದೆ. ಕೊಲೆಯಲ್ಲಿ ಭಾಗಿಯಾದ ಸಾಕ್ಷ್ಯಗಳ ಬಗ್ಗೆ ಎಸ್ ಪಿಪಿ ಉಲ್ಲೇಖ ಮಾಡಿ ಪ್ರಬಲ ವಾದ ಮಂಡನೆ ಮಾಡಿದ್ರೆ ,ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ದರ್ಶನ್ ವಿರುದ್ದ ಸಾಕ್ಷ್ಯಗಳೇ ಇಲ್ಲ, ಪೊಲೀಸರು ಸಾಕ್ಣ್ಯಗಳನ್ನು ಸೃಷ್ಟಿಸಿ ಕಥೆ ಕಟ್ಟಿ ಚಾರ್ಜ್ ಶೀಟ್ ಹಾಕಿದ್ದಾರೆ ಹಾಗಾಗಿ ದರ್ಶನ್ ಗೆ ಜಾಮೀನು ನೀಡ ಬೇಕೆಂದು ವಾದ ಮಂಡನೆ ಮಾಡಿದ್ರು…. ಸುಮಾರು ಒಂದು ವಾರಗಳ ಕಾಲ ನೆಡೆದ ವಾದ ಪ್ರತಿ ವಾದವನ್ನು ಆಲಿಸಿದ ನ್ಯಾಯಾಧೀಶರು ಜಾಮೀನಿನ ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ರು. ಈ ಎಲ್ಲಾ ಲೆಕ್ಕಾಚಾರ ಮಾಡಿರೋ ದರ್ಶನ್ ಹಾಗು ಅವರ ಅಭಿಮಾನಿಗಳು ಬೇಲ್ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ. ದರ್ಶನ್ ಗೆ ಜೈಲಾ ಬೇಲಾ ಅನ್ನೋ ಪ್ರಶ್ನೆಗೆ ಕೋರ್ಟ್ ನಾಳಿನ ತನ್ನ ಆದೇಶದಲ್ಲಿ ಉತ್ತರ ನೀಡಲಿದೆ.