ಬೆಂಗಳೂರು: ಬೇಲ್ ಮೇಲೆ ಹೊರಗಡೆ ಇರೋ ದರ್ಶನಗೆ ಟೆನ್ಷನ್ ತಪ್ಪಿಲ್ಲ.. ಹೈಕೋರ್ಟ್ ಟೆನ್ಷನ್ ನಿಂದ ತಪ್ಪಿಸಿಕೊಂಡಿದ್ದ ದರ್ಶನಗೆ ಈಗ ಸುಪ್ರೀಂ ಕೋರ್ಟ್ ಟೆನ್ಷನ್ ಶುರುವಾಗಿದೆ.. ಇಂದು ವಿಚಾರಣೆ ನಡೆಯಲಿದ್ದು ಆರೋಪಿ ದರ್ಶನಗೆ ಡವ್ ಡವ್ ಶುರುವಾಗಿದೆ.. ಯೆಸ್… ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದಿರೋ ಆರೋಪಿ ದರ್ಶನ ಸೇರಿ ಉಳಿದ ಆರೋಪಿಗಳ ಜಾಮೀನು ಪ್ರಶ್ನಿಸಿ ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಮಂದಿಗೆ ನೀಡಲಾಗಿರುವ ಜಾಮೀನು ರದ್ದುಕೋರಿ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿದೆ.ಕೊಲೆ ಪ್ರಕರಣದ ಆರೋಪಿಗಳಾಗಿರುವ ದರ್ಶನ್, ನಾಗರಾಜು, ಅನುಕುಮಾರ್, ಲಕ್ಷ್ಮಣ್, ಪವಿತ್ರಾಗೌಡ, ಜಗದೀಶ್ ಹಾಗೂ ಪ್ರದೂಷ್ ಅವರಿಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದುಕೋರಿ ಮೇಲ್ಮನವಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ.ಪರಿದಿವಾಲಾ ಮತ್ತು ಆರ್.ಮಹದೇವನ್ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.
ಚಲಿಸುವ ರೈಲಿನಿಂದ ಫೋನ್ ಕೆಳಗೆ ಬಿದ್ದರೆ ಮರಳಿ ಪಡೆಯುವುದು ಹೇಗೆ ಗೊತ್ತಾ..? ಇಲ್ಲಿದೆ ಮಾಹಿತಿ
ಹೌದು.. ಹತ್ಯೆ ಪ್ರಕರಣದಲ್ಲಿ 17 ಮಂದಿ ಆರೋಪಿಗಳಿಗೂ ಜಾಮೀನು ದೊರೆತಿದ್ದು, ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಎನ್ನಲಾದ ಏಳು ಆರೋಪಿಗಳ ಜಾಮೀನು ರದ್ದು ಕೋರಿ 1492 ಪುಟಗಳ ಕಡತವನ್ನ ಸುಪ್ರೀಂಗೆ ಸಲ್ಲಿಸಲಾಗಿದೆ. ವಕೀಲ ಅನಿಲ್ ನಿಶಾನಿ ಮುಖಾಂತರ ರಾಜ್ಯ ಪ್ರಾಸಿಕ್ಯೂಷನ್ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದು, ಬರೋಬ್ಬರಿ 1492 ಪುಟಗಳು ಒಳಗೊಂಡಿದೆ. ಬೃಹತ್ ಕಡತದಲ್ಲಿ ಹೈಕೋರ್ಟ್, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಾಗೂ ದೂರಿನ ಪ್ರತಿ, ಮರಣೋತ್ತರ ಪರೀಕ್ಷೆ ವರದಿ, ಆರೋಪಿಗಳ ಗ್ರೌಂಡ್ಸ್ ಆಫ್ ಅರೆಸ್ಟ್ ಕುರಿತು ನೀಡಿರುವ ಪ್ರತಿ, ಪ್ರತ್ಯಕ್ಷದರ್ಶಿಗಳಾದ ಸಾಕ್ಷಿ ಹೇಳಿಕೆಗಳು,
ಮರಣೋತ್ತರ ವರದಿ ಮೇಲೆ ವೈದ್ಯರಿಂದ ಪಡೆದ ಹೆಚ್ಚುವರಿ ಅಭಿಪ್ರಾಯ ವರದಿ, ಎಫ್ಎಸ್ಎಲ್ ಹಾಗೂ ಎಫ್ಎಸ್ಎಲ್ ವರದಿಗಳ ಪ್ರತಿಗಳು, ಪಂಚನಾಮೆ ರಿಪೋರ್ಟ್, ಆರೋಪಿಗಳ ಬಳಿ ವಶಪಡಿಸಿಕೊಂಡ ಡಿಜಿಟಲ್ ವಸ್ತುಗಳ ವಿಶ್ಲೇಷಣೆ, ಸೆಷನ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾಗೊಳಿಸಿದ ಆದೇಶ ಪ್ರತಿ, ದರ್ಶನ್ಗೆ ನೀಡಿದ್ದ ಮಧ್ಯಂತರ ಜಾಮೀನು ಹಾಗೂ ಅವರ ಅನಾರೋಗ್ಯ ಸಂಬಂಧಿಸಿದ ವೈದ್ಯರ ವರದಿ ಸೇರಿದಂತೆ ಹೀಗೆ 15 ಅಂಶಗಳಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಿದದ್ದಾರೆ ಪ್ರಾಸಿಕ್ಯೂಷನ್…
ಇನ್ನು ಆರೋಪಿ ದರ್ಶನ್ ಈ ಕೇಸ್ನಿಂದ ಹಲವು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ ರಿಲೀಫ್ ಆಗಿದ್ದರು. ಶಸ್ತ್ರಚಿಕಿತ್ಸೆ ನೆಪ ಮಾಡಿಕೊಂಡು ಜಾಮೀನು ಪಡೆದಿದ್ದ ಆರೋಪಿ ದರ್ಶನ.. ಇದುವರೆಗೂ ಶಸ್ತ್ರಚಿಕಿತ್ಸೆ ಬಗ್ಗೆ ಯಾವುದೇ ವರದಿ ನೀಡಿಲ್ಲ. ಈಗ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಬಂದಿರುವುದರಿಂದ ಸದ್ಯ ಢವಢವ ಶುರುವಾಗಿದೆ. ಇಂದು ನಡೆಯಲಿರುವ ವಿಚಾರಣೆಯಿಂದಾಗಿ ಕೊಲೆ ಕೇಸ್ ಆರೋಪಿಗಳಿಗೆ ಮತ್ತಷ್ಟು ಟೆನ್ಷನ್ ಶುರುವಾಗಿದೆ.