ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಲವು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಕಳೆದ ಒಂದೂವರೆ ತಿಂಗಳಿನಿಂದ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಹಲವರಿಗೆ ಶುಕ್ರವಾರ ಹೈಕೋರ್ಟ್ ಜಾಮೀನು ನೀಡಿದೆ. ಅಂತೆಯೇ ಇಂದು ಬೆಳಗ್ಗೆಯೇ ದರ್ಶನ್ ಮ್ಯಾನೇಜರ್ ನಾಗರಾಜ್ ಕಲಬುರಗಿ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಪಟ್ಟಿಯಲ್ಲಿ ದರ್ಶನ್ ಮ್ಯಾನೇಜರ್ ನಾಗರಾಜ್ ಕೂಡ ಅರೆಸ್ಟ್ ಆಗಿದ್ದರು. ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆ ಇಂದು ನಾಗರಾಜ್ ಬಿಡುಗಡೆಯಾಗಿದ್ದಾರೆ.
ನಾಗರಾಜ್ರನ್ನು ಕರೆದುಕೊಂಡು ಹೋಗಲು ಬೆಂಗಳೂರಿನಿಂದ ಅವರ ಆಪ್ತರು ಬಂದಿದ್ದರು. ಕಪ್ಪು ಬಣ್ಣದ ಮಹೀಂದ್ರಾ ಕಾರ್ನಲ್ಲಿ ನಾಗರಾಜ್ ತೆರಳಿದರು. ನಾಗರಾಜ್ ಕಾರ್ನ್ನು ಬಿಳಿ ಬಣ್ಣದ ಇನ್ನೋವಾ ಕಾರು ಹಿಂಬಾಲಿಸಿತು
ಎರಡು ಬ್ಯಾಗ್ಗಳನ್ನು ತಾವೇ ಕೈಯಲ್ಲಿ ಹಿಡಿದುಕೊಂಡು ಬಂದು ಹೊರಗಡೆ ಬೆಂಬಲಿಗರಿಗೆ ನೀಡಿ ಕಾರ್ ಹತ್ತಿದ ನಾಗರಾಜ್ ಬೆಂಗಳೂರಿನ ಕಡೆ ಪ್ರಯಾಣಿಸಿದರು.