ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ದರ್ಶನ್ ಗೆ ಇಂದು ಜಾಮೀನು ಸಿಗುತ್ತಾ ಜಾಮೀನು ಎಂಬ ಕುತೂಹಲ ಮೂಡಿದೆ.
ಶುಕ್ರವಾರ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಏಕಸದಸ್ಯ ಪೀಠ, ಸರ್ಕಾರ ಪರ ವಕೀಲರಾದ ಪ್ರಸನ್ನಕುಮಾರ ವಾದ ಆಲಿಸಿ ಇಂದಿಗೆ ಮುಂದೂಡಿತ್ತು. ದರ್ಶನ್ ಸೇರಿದಂತೆ ಇತರೆ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಲಾಗಿತ್ತು. ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಮಾಡಿದ್ದ ವಾದಕ್ಕೆ ಪ್ರಸನ್ನ ಕುಮಾರ್ ಪ್ರತಿವಾದಿಸಿದ್ರು. ಇಂದು ಮಧ್ಯಾಹ್ನ 2.30ಕ್ಕೆ ಬೇಲ್ ಅರ್ಜಿ ವಿಚಾರಣೆ ನಡೆಸಲಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಈಗಾಗಲೇ ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಇರುವ ನಟ ದರ್ಶನ್ ರೆಗ್ಯೂಲರ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ.