ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
IPL 2025: RCB ಫ್ಯಾನ್ಸ್ಗೆ ಬಿಗ್ ಶಾಕ್: ತಂಡದಿಂದ ಯುವ ಬ್ಯಾಟರ್ ಔಟ್!
ನೂರು ದಿನಗಳ ಸೆರೆವಾಸ.. ಇದು ನಟ ದರ್ಶನ್ ದಿನಚರಿ.. ಬಳ್ಳಾರಿ ಕಾರಾಗೃಹದಲ್ಲಿ 36 ದಿನಗಳನ್ನ ಕಳೆದಿರೋ ದಾಸನಿಗೆ ಒಂದೊಂದು ದಿನವೂ ಯುಗವಾಗಿಬಿಟ್ಟಿದೆ. ಸೆಪ್ಟೆಂಬರ್ 30ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿಗೆ ವಿಚಾರಣೆ ಮುಂದೂಡಿತ್ತು. ಸತತ 8 ಬಾರಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿದ್ದು ನಾಳೆ ಬೇಲ್ ಸಿಗುತ್ತೋ, ಇಲ್ವೋ ಅಂತ ದರ್ಶನ್ ಚಡಪಡಿಸ್ತಿದ್ದಾರೆ ಎನ್ನಲಾಗಿದೆ. ನಿನ್ನೆಯಿಂದ ನವರಾತ್ರಿ ಕೂಡ ಆರಂಭವಾಗಿದ್ದು ಜೈಲಿನಲ್ಲೇ ಹಬ್ಬ ಆಚರಿಸುವಂತಾಗಿದೆ. ಬೆನ್ನುನೋವು, ಕೈ ಮೂಳೆಯ ನೋವಿನಿಂದ ಬಳಲುತ್ತಿದ್ದು ಜೈಲಿನ ಪೆಸಿಲಿಟಿಗಳು ಸಿಗದೇ ಕಾಟೇರ ಹೈರಾಣಾಗಿದ್ದಾರೆ.
ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ನಿನ್ನೆ ಬಳ್ಳಾರಿ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಇದೇ ಮೊದಲ ಬಾರಿಗೆ ಪುತ್ರ ವಿನೇಶ್ ಭೇಟಿ ನೀಡಿದ್ದಾರೆ. ವಿಜಯಲಕ್ಷ್ಮಿ 7ನೇ ಬಾರಿಗೆ ಬಳ್ಳಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ.
ಇಂದು ಜಾಮೀನು ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಪತ್ನಿ, ಪುತ್ರನ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪತ್ನಿ ವಿಜಯಲಕ್ಷ್ಮಿ, ನಟ ದರ್ಶನ್ಗೆ ಡ್ರೈಪ್ರೂಟ್ಸ್, ಬೇಕರಿ ತಿನಿಸು, ಬಟ್ಟೆ ನೀಡಿದ್ದಾರೆ. ಅಪ್ಪನನ್ನು ನೋಡ್ತಿದ್ದಂತೆ ಪುತ್ರ ವಿನೇಶ್ ಐ ಮಿಸ್ ಯೂ ಪಪ್ಪಾ ಎಂದಿದ್ದಾನೆ. ದರ್ಶನ್ ಕೂಡ ಮಿಸ್ ಯೂ ಮಗನೇ ಎಂದಿದ್ದು ಆದಷ್ಟು ಬೇಗ ಜೈಲಿನಿಂದ ಹೊರಬರ್ತೀನಿ, ನಿನ್ನ ಜೊತೆ ಸಮಯ ಕಳೀತೀನಿ ಎಂದಿದ್ದಾರಂತೆ. ಭೇಟಿ ಬಳಿಕ ಅಪ್ಪನ ಜೊತೆ ಮಾತಾಡಿದ್ದು ಖುಷಿ ಆಯ್ತಾ ಅಂತ ವಿಜಯಲಕ್ಷ್ಮಿ ಕೇಳಿದ್ದಾರೆ, ಈ ವೇಳೆ ವಿನೀಶ್ ಹೌದು ಅಂತ ತಲೆ ಅಲ್ಲಾಡಿಸಿದ್ದಾನೆ ಎನ್ನಲಾಗಿದೆ.