ಬೆಂಗಳೂರು:- ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಜೈಲೂಟದಿಂದ ಇಂದು ಮುಕ್ತಿ ಸಿಗುತ್ತಾ? ಅಥವಾ ಜೈಲೂಟವೇ ಗಟ್ಟಿಯಾ ಎಂಬೆಲ್ಲಾ ವಿಚಾರ ಹೈಕೋರ್ಟ್ನಲ್ಲಿ ಇಂದು ತೀರ್ಮಾನ ಆಗಲಿದೆ.
Lalbagh Flower Show: ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಡಾ. ಅಂಬೇಡ್ಕರ್ ಜೀವನಗಾಥೆ!
ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ಗೆ ಮನೆಯೂಟ ಸಿಗುತ್ತಾ ಅಥವಾ ಜೈಲೂಟವೇ ಗತಿಯಾಗುತ್ತಾ ಎಂಬ ಭವಿಷ್ಯ ಹೈಕೋರ್ಟ್ನಲ್ಲಿ ಇಂದು ನಿರ್ಣಯ ಆಗುವ ಸಾಧ್ಯತೆ ಇದೆ.
ಜೈಲಲ್ಲಿ ತಿನ್ನುವ ಊಟ ಜೀರ್ಣ ಆಗುತ್ತಿಲ್ಲ. ಪದೇ ಪದೇ ಫುಡ್ ಪಾಯಿಸನ್ ಆಗುತ್ತಿದೆ. ಇದರಿಂದ ಆರೋಗ್ಯ ಸಮಸ್ಸೆ ಎದುರಾಗಿದೆ. ಹಾಗಾಗಿ ಮನೆಯಿಂದ ಊಟ ಪೂರೈಕೆ ಮಾಡಲು ಅನುಮತಿ ನೀಡಬೇಕು ಎಂದು ದರ್ಶನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ
ಕಳೆದ ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜೈಲಿನ ಮ್ಯಾನ್ಯುವಲ್ ಅಲ್ಲಿ ಮನೆಯ ಊಟ ನೀಡುವುದಕ್ಕೆ ಇರುವ ಅವಕಾಶಗಳು ಏನೇನು? ಮತ್ತೆ ಜೈಲಿನಲ್ಲಿ ದರ್ಶನ್ ಅವರಿಗೆ ಆಗುತ್ತಾ ಇರುವ ಆರೋಗ್ಯ ಸಮಸ್ಸೆ ಎಂತದ್ದು ಅಂತಾ ಉತ್ತರ ನೀಡುವಂತೆ ಜೈಲಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಅಲ್ಲದೇ ಪೊಲೀಸರು ಆಕ್ಷೇಪಣೆ ಸಲ್ಲಿಸುವುದಕ್ಕೆ ಸೂಚನೆ ನೀಡಲಾಗಿತ್ತು. ಹೀಗಾಗಿ ಇಂದು ಆಕ್ಷೇಪಣೆ ಸಲ್ಲಿಸಿ ಹೈಕೋರ್ಟ್ನಲ್ಲಿ ವಾದ ಮಂಡಿಸಲಿದ್ದಾರೆ. ಜೊತೆಗೆ ದರ್ಶನ್ ಮತ್ತು ಗ್ಯಾಂಗ್ನ ನ್ಯಾಯಾಂಗ ಬಂಧನ ಅವಧಿ ಇಂದು ಮುಕ್ತಾಯವಾಗಲಿದೆ.