ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ದರ್ಶನ್ ಜೊತೆ ಮತ್ತೋರ್ವ ಸ್ಯಾಂಡಲ್ ವುಡ್ ನಟನನ್ನು ಅರೆಸ್ಟ್ ಮಾಡಲಾಗಿದೆ.
ಗೃಹಿಣಿಯರೇ ಎಚ್ಚರ, ಎಚ್ಚರ.. ಕುಕ್ಕರ್ನಲ್ಲಿ ಅನ್ನ ಮಾಡಿದ್ರೆ ಹೀಗೆಲ್ಲಾ ಆಗುತ್ತೆ ಹುಷಾರ್..!
ಬಂಧಿತನನ್ನು ಪ್ರದೋಶ್ ಎಂದು ಗುರುತಿಲಾಗಿದ್ದು, ಈತ ಕೂಡ ಸ್ಯಾಂಡಲ್ ವುಡ್ ನಟನಾಗಿದ್ದಾನೆ. ಕನ್ನಡದ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿರುವ ಈತ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ A14 ಆರೋಪಿಯಾಗಿದ್ದಾನೆ
ದರ್ಶನ್ ಜೊತೆಗಿನ ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ಪ್ರದೋಶ್ ನಟಿಸಿದ್ದಾನೆ. ಅಲ್ಲದೇ ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಹಿಂದೆ ಮುಂದೆ ಓಡಾಡಿಕೊಂಡಿದ್ದ. ಇದಲ್ಲದೆ ಬಿಜೆಪಿ ಸಚಿವರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೂಡ ಕೆಲಸ ಮಾಡಿದ್ದು, ಮಾತ್ರವಲ್ಲದೇ ಬಿಜೆಪಿ ಐಟಿ ವಿಭಾಗದಲ್ಲಿಯೂ ಕೆಲಸ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಜೂನ್ 8ರ ರಾತ್ರಿ 10 ಗಂಟೆ ಸುಮಾರಿಗೆ ತೀವ್ರ ಹಲ್ಲೆಯಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಈ ವಿಚಾರ ತಿಳಿದ ದರ್ಶನ್, ಆತಂಕಗೊಂಡು ಕೂಡಲೇ ಪಟ್ಟಣಗೆರೆ ಶೆಡ್ ಗೆ ಬಂದಿದ್ದಾರೆ. ನಂತರ ಮೃತದೇಹ ಕಂಡು ಸುಮಾರು 1.5 ಗಂಟೆ ಅಲ್ಲಿಯೇ ಇದ್ದು, ಬಳಿಕ ಶವ ಬೇರೆಡೆ ಸಾಗಣೆಗೆ ಸಂಚು ರೂಪಿಸಿದ್ದಾರೆ.
ಆಗ ದರ್ಶನ್, 30 ಲಕ್ಷ ರೂ. ನೀಡುತ್ತೇನೆ, ಬಾಡಿಯನ್ನು ಬೇರೆ ಎಲ್ಲಾದರೂ ಬಿಸಾಕಿ ಬಿಡಿ ಎಂದು ತನ್ನ ಆಪ್ತ, ಹೋಟೆಲ್ ಉದ್ಯಮಿ ಪ್ರದೋಶ್ ಗೆ ಸೂಚಿಸಿ ದ್ದಾರೆ. ಪ್ರದೋಶ್ ಮತ್ತಿತರರು ದೇಹವನ್ನು ಸ್ಕಾರ್ಪಿಯೋ ಕಾರಿನಲ್ಲಿ ಒಯ್ದು ಸುಮ್ಮನಹಳ್ಳಿಯ ಅಪಾರ್ಟ್ಮೆಂಟ್ ಒಂದರ ಮುಂಭಾಗದ ಮೋರಿ ಬಳಿ ಎಸೆದು ಹೋಗಿದ್ದಾರೆ.. ಹೀಗಾಗಿ ಇವರನ್ನು ಅರೆಸ್ಟ್ ಮಾಡಲಾಗಿದೆ.