ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಮಾಜಿ ಸಚಿವರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆ.
ಕಲಾಸೇವೆಯ ಜೊತೆ ಜೊತೆಗೆ ರಾಜಕೀಯದಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದ ಅಂಬಿ ಅವರು ಕನ್ನಡಿಗರ ಹೃದಯದಲ್ಲಿ ಸದಾ ಅಜರಾಮರವಾಗಿದ್ದಾರೆ.
ಅಂಬಿ ನಮ್ಮನ್ನ ಅಗಲಿ ಭರ್ತಿ ಐದು ವರ್ಷವಾಗಿದೆ ಇವತ್ತು ಪುತ್ರ ನಟನೆಯ ಸಿನಿಮಾ ಬ್ಯಾಡ್ ಮ್ಯಾನರ್ಸ್ ಕೂಡ ರಿಲೀಸ್ ಆಗುತ್ತಿದೆ
ಮಂಡ್ಯದ ಗಂಡು ಇದ್ದಷ್ಟು ದಿನ ಎಲ್ಲರನ್ನು ರಂಜಿಸಿಯೇ ಹೋಗಿದ್ದು ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ