ಅನೇಕ ಬಾರಿ ನಾವು ಬಾಳೆಹಣ್ಣು ಖರೀದಿಸುವಾಗ ಹಳದಿ ಬಣ್ಣವಿರುವ ಬಾಳೆಹಣ್ಣನ್ನು ಖರೀದಿಸುತ್ತೇವೆ. ಬಾಳೆಹಣ್ಣಿನ ಸಿಪ್ಪೆ ಹಳದಿ ಬಣ್ಣವಾಗಿದೆಯೆಂದರೆ ಬಾಳೆಹಣ್ಣು ಮಾಗಿದೆ ಎಂದರ್ಥ. ಆದರೆ ಕೆಲವೊಮ್ಮೆ ಹೊರಗಿನ ಸಿಪ್ಪೆ ಹಳದಿಯಾಗಿದ್ದರೂ ಒಳಗಿನ ಹಣ್ಣು ತಿನ್ನುವಾಗ ಹಸಿಯಾಗಿಯೇ ಇರುತ್ತದೆ. ಅಂತಹ ಬಾಳೆಹಣ್ಣು ಅಷ್ಟೊಂದು ರುಚಿಯಾಗಿರುತ್ತದೆ
Darshan Arrest: ಜೈಲಿನಲ್ಲಿ ವಿಗ್ ನಿರ್ವಹಣೆ ಮಾಡಲಾಗದೆ ಪೂರ್ಣ ಕೂದಲು ತೆಗೆದ ನಟ ದರ್ಶನ್….!
ನೀವು ಬಾಳೆಹಣ್ಣು ಖರೀದಿಸಲು ಹೋದಾಗ, ಮೊದಲು ಅದರ ಬಣ್ಣವನ್ನು ಪರೀಕ್ಷಿಸಬೇಕು. ಏಕೆಂದರೆ ನೀವು ಖರೀದಿಸುವ ಬಾಳೆಹಣ್ಣು ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಬಾಳೆಹಣ್ಣಿನ ಬಣ್ಣವು ತಿಳಿಸುತ್ತದೆ. ಬಾಳೆಹಣ್ಣಿನ ಬಣ್ಣ ಹಳದಿ, ಸಿಹಿ, ರುಚಿ ಮತ್ತು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಅದೇ ಒಂದು ವೇಳೆ ಬಾಳೆಹಣ್ಣು ಹಸಿರುಬಣ್ಣದಲ್ಲಿದ್ದರೆ ಅದನ್ನು ಖರೀದಿಸಬಾರದು ಯಾಕೆಂದರೆ ಅದು ಮಾಗಿರುವುದಿಲ್ಲ
ಇನ್ನು ಕೆಲವು ಬಾಳೆಹಣ್ಣಿನ ಸಿಪ್ಪೆಯಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇದು ಬಾಳೆಹಣ್ಣು ಅತಿಯಾಗಿ ಹಣ್ಣಾಗಿದೆ ಎನ್ನುವುದರ ಲಕ್ಷಣವಾಗಿದೆ. ಅಂತಹ ಬಾಳೆಹಣ್ಣನ್ನು ಖರೀದಿಸಿದ ಇಂದೆರಡು ದಿನಗಳಲ್ಲಿ ಅದು ಸಂಪೂರ್ಣವಾಗಿ ಹಾಳಾಗುತ್ತದೆ.
ಒಂದೇ ಬಾರಿಗೆ ಹೆಚ್ಚು ಬಾಳೆಹಣ್ಣುಗಳನ್ನು ಖರೀದಿಸಬಾರದು ಏಕೆಂದರೆ ಅವು ದೀರ್ಘಕಾಲದವರೆಗೆ ಇಟ್ಟರೆ ಹಾಳಾಗುತ್ತದೆ. ಅದಕ್ಕಾಗಿ ಒಂದೆರಡು ದಿನಗಳಿಗೆ ಬೇಕಾಗುವಷ್ಟು ಬಾಳೆಹಣ್ಣುಗಳನ್ನು ಮಾತ್ರ ಖರೀದಿಸಿ. ಇದರಿಂದ ಬಾಳೆಹಣ್ಣು ಕೊಳೆಯುವ ಭಯ ಇರೋದಿಲ್ಲ. ಆದ್ದರಿಂದ ನಿಮ್ಮ ದಿನನಿತ್ಯದ ಅವಶ್ಯಕತೆಗನುಗುಣವಾಗಿ ಮಾತ್ರ ಬಾಳೆಹಣ್ಣನ್ನು ಖರೀದಿಸಿರಿ. ಹಾಗೂ ಖರೀದಿಸಿರುವ ಬಾಳೆಹಣ್ಣು ಎರಡು ದಿನಗಳಲ್ಲಿ ಖಾಲಿಯಾಗುವಂತೆ ನೋಡಿಕೊಳ್ಳಿ.
ಬಾಳೆಹಣ್ಣಿನ ಗಾತ್ರವು ಅದು ಯಾವ ತಳಿ ಎಂದು ತಿಳಿಸುತ್ತದೆ. ಬಾಳೆಹಣ್ಣಿನಲ್ಲಿ ಹಲವಾರು ವಿಧಗಳಿವೆ. ಹಾಗಾಗಿ ಅವುಗಳ ಗಾತ್ರಗಳನ್ನು ನೋಡಿ ನಿಮಗೆ ಬೇಕಾಗಿರುವಂತಹ ಬಾಳೆಹಣ್ಣನ್ನು ಆಯ್ಕೆ ಮಾಡಿ.
ಹಲವಾರು ಬಾರಿ ಅಂಗಡಿಯವರು ಡ್ಯಾಮೆಜ ಆಗಿರುವ ಹೆಚ್ಚು ಹಣ್ಣಾಗಿರುವ ಅಥವಾ ಕತ್ತರಿಸಲ್ಪಟ್ಟಿರುವ ಬಾಳೆಹಣ್ಣುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಅಂತಹ ಬಾಳೆಹಣ್ಣುಗಳನ್ನು ಕೊಳ್ಳಬೇಡಿ. ಏಕೆಂದರೆ ಅಂತಹ ಬಾಳೆಹಣ್ಣುಗಳು ಬೇಗನೆ ಹಾಳಾಗುತ್ತವೆ ಮತ್ತು 1-2 ದಿನಗಳಲ್ಲಿ ಕೊಳೆಯಲು ಪ್ರಾರಂಭಿಸುತ್ತವೆ. ಅಂತಹ ಬಾಳೆಹಣ್ಣುಗಳು ಬಹುಬೇಗ ಕೆಡುತ್ತವೆ.
![](https://ainlivenews.com/wp-content/uploads/2024/01/Ad-Banner-copy-scaled.jpg)