ಹುಬ್ಬಳ್ಳಿ : ಜಿಯೋ ಕರ್ನಾಟಕದ 54 ಪಟ್ಟಣಗಳಲ್ಲಿ ಗೃಹ ಮನರಂಜನೆ, ಸ್ಮಾರ್ಟ್ ಹೋಮ್ ಸೇವೆಗಳು ಮತ್ತು ಹೈಸ್ಪೀಡ್ ಬ್ರಾಡ್ಗಾಗಾಗಿ ಅದರ ಸಂಯೋಜಿತ ಎಂಡ್-ಟು-ಎಂಡ್ ಪರಿಹಾರವಾದ ಜಿಯೋ ಏರ್ ಪೈಬರ್ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು.
ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಸೇರಿ ಕರ್ನಾಟಕದ 54 ಪಟ್ಟಣಗಳಲ್ಲಿ ಜಿಯೋ ಏರ್ಫೈಬರ್ನ ಸೇವೆಲಭ್ಯವಿದೆ.
ಈ ಸೇವೆಯನ್ನು ಸೆಪ್ಟೆಂಬರ್ 19 ರಂದು ರಾಷ್ಟ್ರವ್ಯಾಪಿ ಬಿಡುಗಡೆ ಮಾಡಲಾಗಿತ್ತು.ಈ ಮೂಲಕ ದೇಶಾದ್ಯಂತ ಸಮುದಾಯಗಳಿಗೆ ಅತ್ಯಾಧುನಿಕ ಸಂಪರ್ಕ ಪರಿಹಾರಗಳನ್ನು ಒದಗಿಸುವ ಜಿಯೋದ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಜಿಯೋಏರ್ ಫೈಬರ್ ಯೋಜನೆಯು 599 ರೂ.ಗೆ 30 ಎಂಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ. ಅಲ್ಲದೆ, 899 ರೂ ಮತ್ತು ರೂ 1199 ರೂ. ಗೆ 100 ಎಂಬಿಪಿಎಸ್ ವೇಗದ ಯೋಜನೆಗಳು ಲಭ್ಯವಿದೆ. 599 ರೂ ಮತ್ತು 899 ರೂ ಯೋಜನೆಗಳೊಂದಿಗೆ 14 ಓಟಿಟಿ ಅಪ್ಲಿಕೇಶನ್ಗಳು ಲಭ್ಯವಿದ್ದರೆ, 1199 ರೂ ಯೋಜನೆಯು ನೆಟ್ ಫ್ಲೆಕ್ಸ್ , ಅಮೆಜಾನ್ ಪ್ರೈಮ್ ಮತ್ತು ಜಿಯೋ ಸಿನಿಮಾ ಪ್ರೀಮಿಯಂ ಸೇರಿದಂತೆ 17 ಓಟಿಟಿ ಪ್ಲಾಟ್ಫಾರ್ಮ್ಗಳನ್ನು ನೀಡುತ್ತದೆ.
ಜಿಯೋಏರ್ ಪೈಬರ್ ಅತ್ಯುತ್ತಮ ಗುಣಮಟ್ಟದ ಮೌಲ್ಯಾಧಾರಿತ ಸೇವೆಗಳನ್ನು ಒಳಗೊಂಡಂತೆ, ಅಲ್ಲದೇ ರಿಲಯನ್ಸ್ ಜಿಯೋ ಫೈಬರ್ ಯೋಜನೆಗಳನ್ನು ಒದಗಿಸಲು ಸಜ್ಜಾಗಿದೆ.