ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾ (Prana Pratishtha) ಕಾರ್ಯಕ್ರಮ ಸಮಿಪಿಸುತ್ತಿದ್ದಂತೆ, ಇಂದು (ಶುಕ್ರವಾರ) ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನಿತ ಗಣ್ಯರಿಗಾಗಿ ಪ್ರವೇಶ ಪತ್ರದ ಮಾದರಿಯನ್ನು ಬಿಡುಗಡೆ ಮಾಡಿದೆ. ಪ್ರವೇಶ ಪತ್ರದಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ದೇವಾಲಯಕ್ಕೆ ಪ್ರವೇಶ ಸಿಗಲಿದೆ ಎಂದು ಸ್ಪಷ್ಟಪಡಿಸಿದೆ.
ಅಯೋಧ್ಯೆ (Ayodhya) ರಾಮಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ 3,000 ವಿವಿಐಪಿಗಳು ಸೇರಿ 7,000 ಕ್ಕೂ ಹೆಚ್ಚು ಗಣ್ಯ ಅತಿಥಿಗಳಿಗೆ ಆಮಂತ್ರಣ ಪತ್ರಿಕೆ ಮತ್ತು ಪ್ರವೇಶ ಪತ್ರಗಳನ್ನು ಕಳುಹಿಸಿದೆ. ಕ್ಯೂಆರ್ ಕೋಡ್ ಹೊಂದಿದ್ದು, ಅದನ್ನು ಸ್ಕ್ಯಾನ್ ಮಾಡಿದ ಬಳಿಕ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ಸಿಗಲಿದೆ ಎಂದು ತಿಳಿಸಿದೆ
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಬಾಲರಾಮನ ಪ್ರಾಣಪ್ರತಿಷ್ಠಾ ಉತ್ಸವಕ್ಕೆ ಪ್ರವೇಶ ಪಡೆಯಬೇಕಾದರೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನೀಡಿದ ಪ್ರವೇಶ ಪತ್ರದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಆಮಂತ್ರಣ ಪತ್ರಿಕೆ ಮಾತ್ರ ಹಿಡಿದು ಬಂದರೆ ಉತ್ಸವಕ್ಕೆ ಪ್ರವೇಶ ನೀಡುವುದು ಸಾಧ್ಯವಿಲ್ಲ. ಪ್ರವೇಶ ಪತ್ರದ ಮಾದರಿ ಪ್ರತಿಯನ್ನು ಇಲ್ಲಿ ಲಗತ್ತಿಸಲಾಗಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.