ಬೆಂಗಳೂರು:– ಮುಡಾ ಬೆನ್ನಲ್ಲೇ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
ಆರ್.ಅಶೋಕ್ ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣದ ದಾಖಲೆಯನ್ನು ಕಾಂಗ್ರೆಸ್ ಸಚಿವರು ಬಿಡುಗಡೆ ಮಾಡಿದ್ದಾರೆ.
ಚಿನ್ನದ ಹುಡುಗ ನೀರಜ್ ಚೋಪ್ರಾ ತಾಯಿಗೆ ಪತ್ರ ಬರೆದ PM ಮೋದಿ: ಹೇಳಿದ್ದೇನು ಗೊತ್ತಾ!?
ಈ ಬಗ್ಗೆ ಮಾತನಾಡಿದ ಜಿ ಪರಮೇಶ್ವರ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಲದಲ್ಲಿ ಏನಾಗಿತ್ತು ಎಂಬುದನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ಲೊಟ್ಟೆಗೊಲ್ಲಹಳ್ಳಿ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನಿನ ಹಗರಣ ಇದು. ವಿತ್ ರೆಕಾರ್ಡ್ಸ್ ನಾವು ನಿಮ್ಮ ಮುಂದೆ ಮಂಡಿಸುತ್ತೇವೆ. ಲೊಟ್ಟೆಗೊಲ್ಲಹಳ್ಳಿ ಸರ್ವೆ ನಂಬರ್ 10/1 ರಲ್ಲಿ 32 ಗುಂಟೆ ಜಮೀನನ್ನು ಬಿಡಿಎ ನೋಟಿಫೈ ಮಾಡಿತ್ತು. 1977 ಫೆಬ್ರವರಿಯಲ್ಲಿ ಬಿಡಿಎ ಭೂಸ್ವಾಧೀನಕ್ಕೆ ಮೊದಲ ನೊಟಿಫಿಕೇಷನ್ ಹೊರಡಿಸಿತ್ತು.
26 ಫೆಬ್ರವರಿ 2003ರಲ್ಲಿ ಹಾಗೂ 2007ರಲ್ಲಿ ಈ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ. ಬಿಡಿಎ ನೊಟಿಫಿಕೇಷನ್ಗೂ ಮೊದಲು ಈ ಜಮೀನು ರಾಮಸ್ವಾಮಿ ಎನ್ನುವವರ ಒಡೆತನದಲ್ಲಿತ್ತು. ಅದಾದ ಬಳಿಕ ಈ ಜಮೀನು 26 ವರ್ಷ ಬಿಡಿಎ ಒಡೆತನದಲ್ಲಿತ್ತು. ಆದರೆ 2003ರಲ್ಲಿ ಒಂದು ಬಾರಿ ಹಾಗೂ 2007ರಲ್ಲಿ ಆರ್ ಅಶೋಕ್ ಶುದ್ಧಕ್ರಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
38 ಗುಂಟೆ ಬಿಡಿಎ ಭೂಮಿಯನ್ನು ಅಕ್ರಮವಾಗಿ ರೆಜಿಸ್ಟರ್ ಮಾಡಿಸಿಕೊಂಡಿದ್ದಾರೆ ಆರ್ ಅಶೋಕ್. 16/10/2009ರಲ್ಲಿ ರಾಮಸ್ವಾಮಿ ಕಡೆಯವರಿಂದ ಈ ಜಮೀನನ್ನು ಡಿ ನೊಟಿಫಿಕೇಷನ್ ಮಾಡಿಕೊಡಲು ಅರ್ಜಿ ಸಲ್ಲಿಸುತ್ತಾರೆ. ಅಂದಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪನವರು ಆ ಕಡತದ ಮೇಲೆ ‘ಕೂಡಲೇ ಮಂಡಿಸಿ’ ಎಂದು ಬರೆದು ಸಹಿ ಹಾಕಿದ್ದಾರೆ. ಅಸಲಿಗೆ ಈ ಸರ್ವೇ ನಂಬರ್ ಜಮೀನಿನ ಮಾಲೀಕತ್ವ 1977ರಲ್ಲಿ ಬಂದಿದೆ. ಆದರೆ ರಾಮಸ್ವಾಮಿಯಿಂದ ಆರ್ ಅಶೋಕ್ ಕ್ರಯ ಮಾಡಿಸಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಜಿವಿ ಅತ್ರಿ ಎಂಬವರು ಲೋಕಾಯುಕ್ತದಲ್ಲಿ ಈ ಕೇಸ್ಗೆ ಸಂಬಂಧ ಪೆಟಿಷನ್ ಹಾಕಿದ್ದರು. ಪೆಟಿಷನ್ ಲೋಕಾಯುಕ್ತಕ್ಕೆ ಸಲ್ಲಿಕೆಯಾದ ಮೇಲೆ ಆರ್ ಅಶೋಕ್ ಜಮೀನು ವಾಪಾಸ್ ಕೊಡುವ ನಿರ್ಧಾರ ಮಾಡುತ್ತಾರೆ. 28/07/2011ರಲ್ಲಿ ಬಿಡಿಎಗೆ ವಾಪಾಸ್ ಕೊಡುವ ಬಗ್ಗೆ ಪತ್ರ ಬರೆದಿದ್ದರು. ಬಿಡಿಎ ಸ್ವತ್ತನ್ನೇ ಆರ್ ಅಶೋಕ್ ವಾಪಾಸ್ ಬಿಡಿಗೆ ಕೊಡಲು ಯಾರು ಈತ? ಈ ಕೇಸ್ ಹೈ ಕೋರ್ಟ್ ಮೆಟ್ಟಿಲೇರುತ್ತೆ. ಈ ವೇಳೆ ಹೈ ಕೋರ್ಟ್ ಈ ಜಾಗ ಸದ್ಯ ಬಿಡಿಎ ಕೈಯಗೆ ಸೇರಿದೆ. ಹೀಗಾಗಿ ಆರೋಪಿತರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಹಾಕುವ ಅಗತ್ಯ ಇಲ್ಲ ಎಂದು ಹೈ ಕೋರ್ಟ್ ಹೇಳಿತ್ತು ಎಂದು ತಿಳಿಸಿದ್ದಾರೆ.
ಈಗ ಸಿದ್ದರಾಮಯ್ಯ ಪತ್ನಿ ಅವರು ವಾಪಾಸ್ ಕೊಟ್ಟ ಮೇಲೂ ಬಿಜೆಪಿಗರು ಏನು ಹೇಳುತ್ತಿದ್ದಾರೆ? ನಿಮ್ಮ ಜಮೀನೆ ಅಲ್ಲದ ಜಮೀನನ್ನು ನೀವು ವಾಪಾಸ್ ಕೊಟ್ಟು ಬಂದಿದ್ದೀರಿ. ನೀವು ಈಗ ಉಡುಗೊರೆಯಾಗಿ ಸಿಕ್ಕ ಜಮೀನು ವಾಪಾಸ್ ಕೊಟ್ಟ ಮೇಲೂ ಆರೋಪ ಮುಂದುವರೆಸುತ್ತಿದ್ದೀರಿ ಎಂದಿದ್ದಾರೆ.