ಕಂಪ್ಲಿ:– ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರನ್ನು ಬಂಧಿಸಿರುವುದು ಖಂಡನಿಯ, ಈ ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಕಂಪ್ಲಿ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹೌದು ವೀಕ್ಷಕರೇ, ನಗರದ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿರುವ ಪರ ಭಾಷೆಗಳದ ಹಿಂದಿ,ಇಂಗ್ಲಿಷ್, ತೆಲುಗು ಹಾಗೂ ತಮಿಳು ಭಾಷೆಯಲ್ಲಿರುವ ನಾಮಫಲಕಗಳನ್ನು ತೆರವುಗೊಳಿಸಲು ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಹೋರಾಟ ನಡೆಸಿ, ಪರಭಾಷಾ ನಾಮಫಲಕಗಳನ್ನು ಕಿತ್ತೆಸೆದು, ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿಂದೆ ಕನ್ನಡಕ್ಕೆ ಮೊದಲ ಪ್ರಮುಖ್ಯತೆ ನೀಡುವಂತೆ ಪ್ರತಿಯೊಬ್ಬ ವ್ಯಾಪಾರಸ್ಥರಿಗೆ,ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಹೋರಾಟ ನಿರತರಾಗಿದ್ದ ಟಿ.ಎ. ನಾರಾಯಣ ಗೌಡರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮೂಲಕ ಸರ್ಕಾರ ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರವನ್ನು ನಡೆಸಿದೆ ಸರ್ಕಾರದ ಈ ನಡೆಯನ್ನು ಕರವೇ ಕಂಪ್ಲಿ ತಾಲೂಕು ಘಟಕ ಖಂಡಿಸುತ್ತದೆ. ಕರವೇ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ ಅವರ ಆದೇಶದ ಮೇರೆಗೆ ಇಂದು ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಸಲಾಗಿದೆ.
ಈ ಕೂಡಲೇ ಸರ್ಕಾರ ನಮ್ಮ ರಾಜ್ಯಾಧ್ಯಕ್ಷರನ್ನು ಬಿಡುಗಡೆಗೊಳಿಸಬೇಕು. ಒಂದು ವೇಳೆ ಬಿಡುಗಡೆ ಮಾಡದಿದ್ರೆ, ಗ್ರಾಮಮಟ್ಟದಿಂದ ರಾಜ್ಯದವರೆಗಿನ ನಮ್ಮ ಸಂಘಟನೆಯ ಕಾರ್ಯಕರ್ತರನ್ನು ಒಗ್ಗಟ್ಟಿಸಿ, ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಯಣಗೌಡ ಬಣದ ಕಂಪ್ಲಿ ತಾಲೂಕು ಗೌರವಾಧ್ಯಕ್ಷ ಎಂ.ಶ್ರೀನಿವಾಸ,ಪ್ರಧಾನ ಕಾರ್ಯದರ್ಶಿ ಎನ್.ತಿಪ್ಪೇಶ,ಉಪಾಧ್ಯಕ್ಷ ವಿ.ಬಿ.ನಾಗರಾಜ,ರಾಮಸಾಗರ ಗ್ರಾಮ ಘಟಕ ಅಧ್ಯಕ್ಷ ಮೌನೇಶ,ಉಪಾಧ್ಯಕ್ಷ ಹೆಚ್.ಲಿಂಗೇಶ, ಆನಂದ,ಸುದೀಪ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.