ಧಾರವಾಡ: ತಮ್ಮದೇ ಇಲಾಖೆಯ ದಲಿತ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ ವಿಷಯಕ್ಕೆ ಸಂಬಂಧಿಸಿದಂತೆ ಧಾರವಾಡ ಕಲಕೇರಿ ಅರಣ್ಯ ವೃತ್ತದ ಡಿಆರ್ಎಫ್ಓ ಪರಶುರಾಮ ಮಣಕೂರ ಮೇಲೆ ಅಟ್ರಾಸಿಟಿ, ಪ್ರಕರಣ ದಾಖಲಾಗಿದೆ. ಧಾರವಾಡ ಕಲಕೇರಿ ಅರಣ್ಯ ವಲಯದ ಉಪ ವಲಯ ಅರಣ್ಯ ಅಧಿಕಾರಿ ಪರಶುರಾಮ ಮಣಕೂರ ಎಂಬುವರು ತಮ್ಮದೇ ಇಲಾಖೆ ಸಹ ಸಿಬ್ಬಂದಿ (ಉಪ ವಲಯ ಅರಣ್ಯ ಅಧಿಕಾರಿ) ಅವಿನಾಶ ರಣಕಾಂಬೆ ಅವರ ಮೇಲೆ ಡಿಸೆಂಬರ್ 6 ರಂದು ಮಧ್ಯಾಹ್ನ 2.30ರ ಸಮಯದಲ್ಲಿ ಜಾತಿ ನಿಂದನೆ ಮಾಡಿ,
ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಅಷ್ಟೇ ಅಲ್ಲದೇ ಅವಿನಾಶಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಧಾರವಾಡ ಉಪನಗರ ಪೋಲಿಸ್ ಠಾಣೆಯಲ್ಲಿ ಅವಿನಾಶ ನೀಡಿದ ದೂರಿನ ಮೇರೆಗೆ ಜ.6 ರಂದು ಡಿಆರ್ಎಫ್ಓ ಮಣಕೂರ ಮೇಲೆ ಎಫ್.ಐ.ಆರ್ ದಾಖಲಾಗಿದೆ.
South Korea: ನಾಯಿ ಮಾಂಸ ಸೇವನೆಗೆ ರದ್ದು : ದಕ್ಷಿಣ ಕೊರಿಯಾ ಸಂಸತ್ತಿನಲ್ಲಿ ಮಸೂದೆ ಅಂಗೀಕಾರ!
ಅರಣ್ಯ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ಮೇಲೆ ನಿತ್ಯ ಅನೇಕ ರೀತಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆಯಂತಹ ಘಟನೆಗಳು ಮೊದಲಿನಿಂದಲೂ ನಡೆಯುತ್ತಲೇ ಇವೆ. ಆದರೆ ಅವು ಮೇಲಾಧಿಕಾರಿಯ ಪ್ರಭಾವ ಹಾಗೂ ಹಿರಿಯ ಅಧಿಕಾರಿಗಳ ಅಭಯದಿಂದ ಅಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರಲಿಲ್ಲ. ಅದಕ್ಕೆ ಅಪವಾದ ಎಂಬಂತೆ ಧಾರವಾಡ ವಲಯದಲ್ಲಿ ನಡೆದ ತಮ್ಮದೇ ಸಿಬ್ಬಂದಿಯ ದೌರ್ಜನ್ಯ ಸಹಿಸದೇ, ಸಹ ಸಿಬ್ಬಂದಿ ಅವಿನಾಶ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಇದು ಅರಣ್ಯ ಇಲಾಖೆಯ ಇತಿಹಾಸದಲ್ಲಿ ಒಂದೇ ಇಲಾಖೆಯ ಸಹ ಸಿಬ್ಬಂದಿ ಮೇಲೆ ದಾಖಲಾದ ಪ್ರಥಮ ಪ್ರಕರಣವಾಗಿದೆ.