ಹುಬ್ಬಳ್ಳಿ: ಸರ್ಕಾರ ಬಿಳಿಸುವ ಪ್ರವೃತ್ತಿ ಇರೋರು ಬಿಜೆಪಿ ಅವರು ಎಂದು ಹುಬ್ಬಳ್ಳಿಯಲ್ಲಿ ಸಂತೋಷ್ ಲಾಡ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ಭಾಗದಲ್ಲಿ ಬರಗಾಲ ಹಾಗೂ ನರೇಗಾ ವೀಕ್ಷಣೆ ಇಟ್ಕೊಂಡಿದ್ವಿ, ಕಳೆದ 40 ನಿಮಿಷದಿಂದ ಜೋರಾಗಿ ಮಳೆ ಬರ್ತಾ ಇದೆ. ನಾವು ತೆರಳಬೇಕಾದ ಸ್ಥಳದಲ್ಲೂ ಮಳೆ ಬರ್ತಾ ಇದೆ.
ಇನ್ನು ಎರಡುಮೂರು ದಿನ ಹೀಗೆ ಮಳೆ ಮುಂದುವರಿಯಲಿ. ಇವತ್ತು ಸಂಜೆ ಸಂಪೂರ್ಣ ಬರದ ಬಗ್ಗೆ ನಿಮಗೆ ಮಾಹಿತಿ ಕೊಡಬೇಕು ಅಂದುಕೊಂಡಿದ್ದೆ. ಆಕಸ್ಮಿಕವಾಗಿ ಮಳೆ ಬಂದಿದೆ ಹೀಗಾಗಿ ಬರ ವೀಕ್ಷಣೆ ಮುಂದುವರೆಸಲು ಆಗೋದಿಲ್ಲ. ಇಲ್ಲಿ ಬಂದ ಸಾರ್ವಜನಿಕರೊಂದಿಗೆ ಚರ್ಚೆ ಮಾಡ್ತೇವೆ. ಮಳೆ ಬಂದಿದ್ದು ಅತ್ಯಂತ ಖುಷಿ ತಂದಿದೆ ಎಂದು ಹೇಳಿದರು.
ಸರ್ಕಾರದ ಬಗ್ಗೆ ಹೊರ ರಾಜ್ಯದಲ್ಲಿ ಮೋದಿ ಹೇಳಿಕೆ ವಿಚಾರ
ಇನ್ನೂ ಮೋದಿ ಸಾಹೇಬರು ಮಾಡಿರುವ ಭಾಷಣ ಎಲ್ಲರಿಗೂ ಗೊತ್ತಿದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಎಷ್ಟು ಹಣ ಕೊಟ್ಟಿದೆ?. ಇವತ್ತು ಮಧ್ಯ ಪ್ರದೇಶಕ್ಕೆ ಹೋಗಿ ಕರ್ನಾಟಕದ ಬಗ್ಗೆ ಮಾತನಾಡ್ತಾರೆ. ರಾಜ್ಯ ಸರ್ಕಾರ ಏನು ಮಾಡಿದೆ ಅಂತ ಅವರು ಯಾವತ್ತೂ ಹೇಳೋದಿಲ್ಲ? ಅದೇ ರಾಜ್ಯದಲ್ಲಿ ನಡೆದ ವ್ಯಾಪಂ ಹಗರಣದ ಬಗ್ಗೆಯೂ ಮಾತನಾಡಲಿ. ಆ ಪ್ರಕರಣದಲ್ಲಿ 48 ಆರೋಪಿಗಳು ಕೊಲೆಯಾದರು.
ಇದೇ ಬಿಜೆಪಿ ಸರ್ಕಾರ ರಾಜ್ಯ ಹಾಗೂ ಕೇಂದ್ರದಲ್ಲಿದೆ. ಇದರ ಬಗ್ಗೆ ಯಾರು ಮಾತನಾಡಬೇಕು? ಎಂದು ಪ್ರಶ್ನಿಸಿದರು. ಪ್ರಧಾನ ಮಂತ್ರಿ ಮೆಡಿಕಲ್ ರಿಲೀಫ್ ಸ್ಕೀಮ್ನಲ್ಲಿ ಒಂದೇ ಮೊಬೈಲ್ನಿಂದ 7 ಲಕ್ಷ ಜನರಿಗೆ ಲಾಭ ಕಲ್ಪಿಸಲಾಗಿದೆ. ಇದು ನಡೆದಿದ್ದು ಮಧ್ಯಪ್ರದೇಶ ರಾಜ್ಯದಲ್ಲಿ, ಆದರೆ ಅವರು ನಮ್ಮ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಮಧ್ಯ ಪ್ರದೇಶ, ಗೋವಾ ಸರ್ಕಾರವನ್ನು ಬೀಳಿಸಿದ್ರು ಬಿಜೆಪಿ ಅವರು ಎಂದು ಕಿಡಿಕಾರಿದರು.