ಹುಬ್ಬಳ್ಳಿ :- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೀದಿಯಲ್ಲಿ ಎರಡು ಗುಂಪುಗಳು ಕಟ್ಟಿಗೆ , ಕಲ್ಲುಗಳಿಂದ ಹೊಡೆದಾಡಿಕೊಂಡ ಘಟನೆ ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲನಿಯಲ್ಲಿ ನಡೆದಿದೆ.
ಜ್ಯೋತಿ ಹನೀಫ ಅಂಚಿಟಗೇರಿ ಎಂಬುವವರು ಈ ಹಿಂದೆ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಗಂಡನಾದ ಹನೀಫ ಈತನ ವಿರುದ್ಧ ದೂರು ಸಲ್ಲಿಸಿದ್ದರು. ಇದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದ್ದು. ಈ ಕೇಸನ್ನು ನೀನು ಹಿಂದೆ ತೆಗೆದುಕೊ ಅಂತ ಹೇಳಿದ್ದರು. ಅದಕ್ಕೆ ಜ್ಯೋತಿ ಒಪ್ಪದಿದ್ದಕ್ಕೆ ಆರೋಪಿತರಾದ ಮೊಹಮ್ಮದ ಹುಸೇನ ಅಂಚಿಟಗೇರಿ ,ಗುರುನಾಥ ಅಂಚೆಟಗೇರಿ, ಅನೀಲ ಹರ್ಪನಹಳ್ಳಿ, ಅರ್ಜುನ ಕಂಚಗಾರ ಸೇರಿ 12 ಜನರು ಕೂಡಿಕೊಂಡು
ಇಟ್ಟಿಗೆ, ಕಟ್ಟಿಗೆಯಿಂದ ಹಾಗೂ ದೊಣೆಯಿಂದ ಜ್ಯೋತಿ, ಮಂಜುನಾಥ, ಹಾಗೂ ಶಂಕರ ಇವರ ತಲೆಗೆ ಹೊಡೆದು ಹಾಗೂ ಭರತ ಈತನಿಗೆ ಕೈಯಿಂದ ಮೈ ಕೈಗೆ ಹೊಡೆದು ಗಾಯ ಪಡಿಸಿ ಅವಾಚ್ಯವಾಗಿ ಬೈದಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜ್ಯೋತಿ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲಿಯೇ ಹೊಡೆದಾಟ ನಡೆದಿದ್ದು, ಪೊಲೀಸರ ಲಘು ಲಾಠಿ ಏಟಿಗೆ ಜಗ್ಗದೆ ಮಾರಾಮಾರಿ ನಡೆಸಿದ ಕುಟುಂಬಸ್ಥರಲ್ಲಿ ನಾಲ್ವರಿಗೆ ಗಾಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.