ಬೆಂಗಳೂರು:– ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡನನ್ನು ಹೀಗಾಗಲೇ ಬ್ಯಾಡರಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದೀಗ ಸ್ಥಳ ಮಹಜರಿಗಾಗಿ ನಿನ್ನೆ ರಾತ್ರಿ ಬೆಂಗಳೂರಿನಿಂದ ಪೊಲೀಸರು ರಾಯಚೂರಿಗೆ ಕರೆದೊಯ್ದಿದ್ದಾರೆ. ಮಗು ದತ್ತು ಪಡೆದ ಜಾಗದಲ್ಲಿ ಸ್ಥಳ ಮಹಜರು ಮಾಡಲಿದ್ದು, ಪೋಷಕರ ವಿಚಾರಣೆಯನ್ನು ನಡೆಸಲಿದ್ದಾರೆ. ಮಗುವನ್ನು ಮಾರಾಟ ಮಾಡಲಾಗಿದ್ಯಾ ಎಂದು ಪರಿಶೀಲನೆ ಮಾಡಲಾಗುತ್ತದೆ. ಹಣ ಪಡೆದು ಮಕ್ಕಳನ್ನು ಕೊಟ್ಟಿದ್ರೆ ಹ್ಯೂಮನ್ ಟ್ರಾಫಿಕಿಂಗ್ ಆಗಲಿದೆ. ಹಾಗಾಗಿ ಕೂಲಂಕುಶವಾಗಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.