ಬೆಂಗಳೂರು:-ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಮುದುಕ ಮುದುಕಿಯರ ತನಕ ರೀಲ್ಸ್ ಮಾಡೋದು ಕಾಮನ್ ಆಗಿದೆ.
ಆದರೆ ಈ ರೀಲ್ಸ್ ಗೋಜಿಗೆ ಬೀಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ರೀಲ್ಸ್ ಹುಚ್ಚಿನಿಂದ ಸರ್ಕಾರಿ ವಾಹನಗಳ ಮೇಲೂ ಹುಚ್ಚಾಟ ಮೆರೆಯಲಾಗಿದೆ. ಇಷ್ಟು ದಿನ ನಮ್ಮ ಮೆಟ್ರೋ, BMTCಯಲ್ಲಿ ಹುಚ್ಚಾಟ ಮೆರೆಯಲಾಗುತ್ತಿತ್ತು. ಇದೀಗ KSRTC ಬಸ್ ನಲ್ಲಿ ರೀಲ್ಸ್ ಗಾಗಿ ಹುಚ್ಚಾಟ ಮೆರೆಯಲಾಗಿದೆ.
ಕಟ್ಟಡ ನಿರ್ಮಾಣ ಕಾಮಗಾರಿಗೆ ಬೆಂಗಳೂರಿನಲ್ಲಿ ಸಿಗುತ್ತಿಲ್ಲ ಕಾರ್ಮಿಕರು!?, ಯಾಕೆ ಗೊತ್ತಾ!?
KSRTC ಬಸ್ ನಲ್ಲೂ ರೀಲ್ಸ್ ಮಾಡಿ ಹುಚ್ಚಾಟ ಯುವಕ ಹುಚ್ಚಾಟ ಮೆರೆದ ದೃಶ್ಯ ಸೆರೆಯಾಗಿದೆ. ಪ್ರಸಾದ್ ಜಾಕಿ ಎಂಬ ಯುವಕನಿಂದ KSRTC ಬಸ್ ನಲ್ಲಿ ಹುಚ್ಚಾಟ ಮೆರೆಯಲಾಗಿದೆ. KSRTCನಲ್ಲಿ ಇರುವ ಗೇರ್ ಲಿವರ್ ಕಿತ್ತು ಎಸೆಯಲು ಯುವಕ ಮುಂದಾಗಿದ್ದಾನೆ. ಬಸ್ ಚಾಲನೆ ವೇಳೆ ಚಾಲಕ ಗೇರ್ ಹಾಕಲು ಮಂದಾದ ವೇಳೆ ಅದನ್ನ ನಗೆಬಾಟಲಿ ಮಾಡಿದ್ದಾನೆ ಯುವಕ. ಪ್ರಯಾಣಿಕರನ್ನ ಇಳಿಸಿದ ಬಳಿಕ ಚಾಲಕ ಬಸ್ ಇಳಿಯುತ್ತಿದ್ದಂತೆ ಪ್ರಸಾದ್ ಎಂಬ ಯುವಕನಿಂದ ಕೃತ್ಯ ನಡೆದಿದೆ.
ಚಾಲಕ ಇಲ್ಲದ ವೇಳೆ ರೀಲ್ಸ್ ಮಾಡುತ್ತಾ ಗೇರ್ ಲಿವರ್ ಮುರಿಯಲು ಯತ್ನಿಸಲಾಗಿದೆ. ಅದನ್ನ ವಿಡಿಯೋ ಮಾಡಿ ನಗೆ ಬಾಟಲಿ ಮೂಲಕ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಯುವಕನ ಹುಚ್ಚಾಟ ಕಂಡು ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಪ್ರಸಾದ್ ಜಾಕಿ ಹೆಸರಿನ ಖಾತೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಕೂಡಲೇ ಹುಚ್ಚಾಟ ಮೆರೆದ ಯುವಕನನ್ನ ಬಂಧಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಯುವಕನ ಹುಚ್ಚಾಟದಿಂದ ಅಪಘಾತ ಆಗುವ ಸಂಭವ ಇತ್ತು ಎಂದು ಆಕ್ರೋಶ ವ್ಯಕ್ತವಾಗಿದೆ.