ಬೆಂಗಳೂರು: ಡ್ರೈವರ್ ಕೆಲಸ ತುಂಬಾ ಜವಾಬ್ದಾರಿಯುತವಾಗಿದ್ದು. ಯಾಕೆಂದರೆ, ಪ್ರಯಾಣಿಕರ ಜೀವದ ಹೊಣೆ ಚಾಲಕನ ಮೇಲಿರುತ್ತದೆ. ಚಾಲಕನ ಮೇಲೆ ನಂಬಿಕೆ ಇಟ್ಟೇ ಜನ ಬಸ್ಸಿಗೆ ಹತ್ತಿರುತ್ತಾರೆ. ಆದರೆ, ಕೆಲವೊಂದು ಸಲ ಕೆಲ ಚಾಲಕರು ತೋರುವ ನಿರ್ಲಕ್ಷ್ಯ ದೊಡ್ಡ ದುರಂತಕ್ಕೇ ಕಾರಣವಾಗುತ್ತದೆ. ಈ ಬಗ್ಗೆ ಅಧಿಕಾರಿಗಳೆಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೆಲವು ಚಾಲಕರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಸದ್ಯ ಅಂತಹದ್ದೊಂದು ವಿಡಿಯೋ ವೈರಲ್ ಆಗಿದೆ.
ಹೌದು ಬಿಎಂಟಿಸಿ ಬಸ್ ಚಲಾಯಿಸುತ್ತಲೇ ಚಾಲಕ ಮೊಬೈಲ್ನಲ್ಲಿ ರೀಲ್ಸ್ ನೋಡುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದ್ದು, ಚಾಲಕನ ನಡೆಗೆ ಜನಾಕ್ರೋಶ ವ್ಯಕ್ತವಾಗಿದೆ. ಹೊಸೂರು ರೋಡ್ ಟು ಲಾಲ್ಬಾಗ್ ನಡುವೆ ಸಂಚರಿಸುವ ಬಸ್ವೊಂದರ ಚಾಲಕ ಟ್ರಾಫಿಕ್ ನಡುವೆ ರೀಲ್ಸ್ ನೋಡುತ್ತ ಬಸ್ ಓಡಿಸುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದೆ.
ಚಳಿಗಾಲ ಮಾತ್ರವಲ್ಲ, ಬೇಸಿಗೆಯಲ್ಲೂ ಹಿಮ್ಮಡಿ ಒಡೆಯುತ್ತಾ..? ಕಾರಣವೇನು..? ಪರಿಹಾರಗಳು ಇಲ್ಲಿದೆ ನೋಡಿ
ಎರಡು ದಿನಗಳ ಹಿಂದೆ ಸಂಜೆ 5 ಗಂಟೆ ಸುಮಾರಿಗೆ ಸಂಚರಿಸುವ ವೇಳೆ ಟ್ರಾಫಿಕ್ ನಡುವೆ ಬಸ್ ಚಲಾಯಿಸುತ್ತಲೇ, ಸ್ಟೇರಿಂಗ್ ಮೇಲೆ ಮೊಬೈಲ್ ಹಿಡಿದು ರೀಲ್ಸ್ ಸ್ಕ್ರಾಲ್ ಮಾಡಿದ್ದಾನೆ. ಇದನ್ನ ಅದೇ ಬಸ್ನಲ್ಲಿ ಡ್ರೈವರ್ ಸೀಟಿನ ಹಿಂಬದಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದೇ ರೀತಿ ಮತ್ತೊಬ್ಬ ಚಾಲಕನ ನಿರ್ಲಕ್ಷ್ಯದ ಚಾಲನೆ ವೀಡಿಯೋ ಕೂಡ ವೈರೆಲ್ ಆಗಿದೆ.