ಬೆಂಗಳೂರು: ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆ-1 ಕ್ಕೆ 8,96,447 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಬಾರಿಯ ಎಸ್ಎಸ್ಎಲ್ಸಿ ಉತ್ತೀರ್ಣಕ್ಕೆ ಕನಿಷ್ಠ 35 ಅಂಕದ ಬದಲು 33ಕ್ಕೆ ಇಳಿಸಿ ಎಂದು ಸರ್ಕಾರಕ್ಕೆ ಖಾಸಗಿ ಶಾಲೆಗಳು ಒತ್ತಾಯ ಮಾಡಿವೆ.
ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಖಾಸಗಿ ಶಾಲೆಗಳ ಒಕ್ಕೂಟ ಕನಿಷ್ಠ 35 ಅಂಕಗಳ ಬದಲಾಗಿ ಈ ವರ್ಷದಿಂದಲೇ ಪಾಸ್ ಮಾನದಂಡವನ್ನು 33 ಅಂಕಗಳಿಗೆ ಬದಲಾವಣೆ ಮಾಡುವಂತೆ ಒತ್ತಾಯಿಸಿದೆ.
Papaya Benefits: ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನಿ ಸಾಕು.. ಶುಗರ್, ಅಜೀರ್ಣ, ಅಸಿಡಿಟಿ ಸಮಸ್ಯೆಗಳು ಮಾಯ..!
ಸಿಬಿಎಸ್ಸಿ, ಐಸಿಎಸ್ಸಿ ಪಠ್ಯಕ್ರಮದಲ್ಲಿ ಪಾಸ್ ಅಂಕ 33 ಇದೆ. ಇದೇ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ 33 ಅಂಕಗಳಿಗೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಹೇಳಿದೆ.
ಈಗಾಗಲೇ 33 ಅಂಕದ ಮಾದರಿ ಜಾರಿಗೆ ಶಿಕ್ಷಣ ಇಲಾಖೆಯ ಜೊತೆ ಖಾಸಗಿ ಶಾಲೆಗಳು ಸಭೆ ಮಾಡಿದ್ದವು. ಆದರೆ ಈವರೆಗೂ ಶಿಕ್ಷಣ ಇಲಾಖೆ ಈ ಪ್ರಸ್ತಾಪವನ್ನು ಪರಿಗಣನೆ ಮಾಡಿರಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದೆ. ಅಂಕ ಕಡಿತದ ಬಗ್ಗೆ ನಿರ್ಧಾರ ಮಾಡುವಂತೆ ಸಭಾಪತಿ ಬಸವರಾಜ್ ಹೊರಟ್ಟಿ ಸಹ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.