ಕಲಬುರಗಿ:- ಗಾಣಗಾಪುರ ಗುರು ದತ್ತನ ಭಕ್ತರಿಗೆ ಕೇಂದ್ರ ಸರ್ಕಾರ ಇದೀಗ ಗುಡ್ ನ್ಯೂಸ್ ಕೊಟ್ಟಿದೆ.ಹೌದು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರ ಪುಣ್ಯಕ್ಷೇತ್ರದಲ್ಲಿರು ರೈಲು ನಿಲ್ದಾಣ ಇನ್ಮುಂದೆ ಹೊಸ ಲುಕ್ ಪಡೆಯಲಿದೆ..
ಅಮೃತ್ ಭಾರತ್ ಯೋಜನೆಗೆ ಗಾಣಗಾಪುರ ರೇಲ್ವೆ ಸ್ಟೇಷನ್ ಆಯ್ಕೆ ಹಿನ್ನಲೆ ರೇಲ್ವೆ ಸ್ಟೇಷನ್ ಪುನರ್ ಅಭಿವೃದ್ಧಿಗೆ ಇಂದು ಶಂಕುಸ್ಥಾಪನೆ ನಡೆಯಲಿದೆ
ವರ್ಚುವಲ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.ಈ ಕಾರ್ಯಕ್ರಮ ವೀಕ್ಷಿಸಲು ಗಾಣಗಾಪುರದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಸಂಸದ ಉಮೇಶ್ ಜಾಧವ್ ಸೇರಿ ಹಲವರು ಭಾಗಿಯಾಗಲಿದ್ದಾರೆ.