ಬೆಂಗಳೂರು:- ಕನ್ನಡ ರಾಜ್ಯೋತ್ಸವಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಸರ್ಕಾರಿ ಅಧಿಕಾರಿಗಳ ಐಡಿ ಕಾರ್ಡ್ಗೆ ಕೆಂಪು-ಹಳದಿ ಬಣ್ಣದ ಟ್ಯಾಗ್ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷವಾದ ಹಿನ್ನೆಲೆಯಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದಂತೆ. ನಾಡಿನಾದ್ಯಂತ ಕನ್ನಡ ಕಲರವ ಮನೆ-ಮನವನ್ನು ಮುಟ್ಟಿಸಲು ಮುಂದಾಗಿದೆ. ಇದರ ಭಾಗವೆಂಬಂತೆ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ಸರ್ಕಾರಿ ಅಧಿಕಾರಿಗಳು ಧರಿಸುವ ಗುರುತಿನ ಚೀಟಿ ಟ್ಯಾಗ್ ನಾಡಧ್ವಜ ಬಣ್ಣದಲ್ಲೇ ಇರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಅಧಿಕಾರಿಗಳು ಕನ್ನಡ ರಾಜ್ಯೋತ್ಸವದೊಳಗೆ ಕಡ್ಡಾಯವಾಗಿ ಗುರುತಿನ ಚೀಟಿಗೆ ಕೆಂಪು-ಹಳದಿ ಬಣ್ಣದ ಟ್ಯಾಗ್ ಅನ್ನೇ ಧರಿಸಬೇಕು ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಡಿಪಿಎಆರ್ ಸೂಚನೆ ನೀಡಿದೆ.