ಬೆಂಗಳೂರು:- 12 ವರ್ಷಗಳಲ್ಲೇ ಬೆಂಗ್ಳೂರು ಮೆಟ್ರೋದಲ್ಲಿ ದಾಖಲೆ ಪ್ರಯಾಣ ಮಾಡಲಾಗಿದೆ.
ಲಾಲ್ಬಾಗ್ ಫ್ಲವರ್ ಶೋ ಹಾಗೂ ಲಾಂಗ್ ವೀಕೆಂಡ್ ರಜೆ ಹಿನ್ನೆಲೆ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಭಾರೀ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣ ತಲುಪಿದೆ.
Independence Day: ಹಾಸನದಲ್ಲಿ 2500 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ!
ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ನೀಡಿರುವ ನಮ್ಮ ಮೆಟ್ರೋ, ಆಗಸ್ಟ್ 14 ರಂದು ಒಂದೇ ದಿನ ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ಬರೋಬ್ಬರಿ 9.17 ಲಕ್ಷ ಮಂದಿ ಸಂಚಾರ ನಡೆಸಿದ್ದಾರೆ. ಇದು ಈವರೆಗಿನ ಅತೀ ಹೆಚ್ಚು ಪ್ರಯಾಣಿಕರು ಓಡಾಟ ಮಾಡಿದ ಸಂಖ್ಯೆಯಾಗಿದೆ ಎಂದು ತಿಳಿಸಿದೆ
ಇತ್ತೀಚೆಗೆ ಆಗಸ್ಟ್ 06 ರಂದು ನಮ್ಮ ಮೆಟ್ರೋದಲ್ಲಿ ಒಂದೇ ದಿನ ಬರೋಬ್ಬರಿ 8.26 ಲಕ್ಷ ಮಂದಿ ಸಂಚರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ ಒಂದೇ ವಾರದಲ್ಲಿ ಆ ದಾಖಲೆ ಅಳಿದಿದ್ದು, ಇದು ಮೆಟ್ರೋ ಆರಂಭವಾದ ಕಳೆದ ಸುಮಾರು 12 ವರ್ಷಗಳ ಸಾರ್ವಕಾಲಿಕ ದಾಖಲೆ ಆಗಿದೆ ಎಂದು ನಮ್ಮ ಮೆಟ್ರೋ ಹೇಳಿದೆ.