ಬಿಜೆಪಿಯ ಬಂಡಾಯದ ಬಾವುಟವನ್ನು ಕೆಳಗಿಳಿಸಲು ನಿನ್ನೆ RSS ನಾಯಕರು ಬಿಜೆಪಿಯ ಎರಡೂ ಟೀಂ ನಡುವೆ ಸಂಧಾನ ಸಭೆ ಮಾಡಿ ಎಲ್ಲವೂ ಸರಿಹೋಯ್ತು ಅಂತ ಜಾಗಟೆ ಬಾರಿಸಿ ಹೋಗಿದ್ರು. ಇದೀಗ ಮಾರನೆಯ ದಿನವೇ ಸಂಧಾನ ವಿಫಲವಾಗಿದ್ದು ರೆಬಲ್ಸ್ ಟೀಂ ಪ್ರತ್ಯೇಕವಾಗಿ ಹೋರಟಕ್ಕಿಳಿದಿದ್ದಾರೆ, ರಾಜ್ಯಪಾಲರನ್ನು ಭೇಟಿಯಾಗಿ ವಾಲ್ಮೀಕಿ ಹಗರಣ ಬಗ್ಗೆ ದೂರು ಕೊಟ್ಟಿರೋ ಅಸಮಾಧಾನಿತರು. ಎಲ್ಲರೂ ಒಟ್ಟಾಗಿ ಹೋಗೋ ಮಾತೇ ಇಲ್ಲ ನಮ್ಮ ದಾರಿ ನಮಗೆ ನಿಮ್ಮ ದಾರಿ ನಿಮಗೆ ಅನ್ನೋ ಮೆಸೇಜ್ ಅನ್ನ ಪರೋಕ್ಷವಾಗಿ ಪಾಸ್ ಮಾಡಿದ್ದಾರೆ…
ಇಂತವರು ಸೀತಾಫಲ ತಿನ್ನಲೇಬೇಡಿ: ಏಕೆ ಗೊತ್ತಾ!?,ಈ ಸುದ್ದಿ ನೀವು ನೋಡಲೇಬೇಕು!
ಬಿಜೆಪಿಯೊಳಗಿನ ಅಸಮಾಧಾನ, ಭಿನ್ನಮತ, ಗುಂಪುಗಾರಿಕೆಯನ್ನು ಶಮನ ಮಾಡಲು RSS ನಾಯಕರು ನಿನ್ನೆ ವಿಜಯೇಂದ್ರ ಟೀಂ ಹಾಗೂ ರೆಬಲ್ಸ್ ಟೀಂ ಜೊತೆ ಸಂಧಾನ ಸಭೆ ಮಾಡಿದ್ರು. ಬೈಟೆಕ್ ನಲ್ಲಿ ಎರಡೂ ಗುಂಪುಗಳ ನಡುವಿನ ಮನಸ್ತಾಪ ಎಲ್ಲಾ ಬಗೆಹರಿಸಿದ್ದೀವಿ, ಇನ್ಮುಂದೆ ಯಾವುದೇ ಮನಸ್ತಾಪ ಬರಲ್ಲ. ಎಲ್ಲರೂ ಒಟ್ಟಾಗಿ ಇನ್ಮುಂದೆ ಸರ್ಕಾರ ವಿರುದ್ಧ ಹೋರಾಟ ಮಾಡ್ತಾರೆ ಅಂತ ಪುಂಕಾನು ಪುಂಕವಾಗಿ ಎಲ್ಲಾ ನಾಯಕರು ಹೇಳಿದ್ದೇ ಹೇಳಿದ್ದು, ಎಲ್ಲರೂ ಕೇಳಿದ್ದೇ ಕೇಳಿದ್ದು. ಇದೀಗ ಸಂಘದ ಸಂಧಾನ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂಗಾಗಿದೆ ವಿಜಯೇಂದ್ರ ಟೀಂಗೆ ಸೆಡ್ಡು ಹೊಡೆದಿರೋ ರೆಬಲ್ಸ್ ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿಯಾಗಿದೆ….
ಎಲ್ಲರೂ ಒಟ್ಟಾಗಿ ಹೋರಾಟ ಮಾಡಿ ಅಂತ ನಿನ್ನೆಯೇ ಸಂಘ ಆದೇಶ ಕೊಟ್ಟಿದೆ ಅದನ್ನ ಗಾಳಿಗೆ ತೂರಿರೋ ರೆಬಲ್ಸ್ ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ರು. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಸೋಮಲಿಂಗಪ್ಪ ಸೇರಿದಂತೆ 10 ಕ್ಕೂ ಹೆಚ್ಚು ನಾಯಕರು ವಾಲ್ಮೀಕಿ ಹಗರಣದ ಬಗ್ಗೆ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಈ ಮೂಲಕ ಬಳ್ಳಾರಿ ಪಾದಯಾತ್ರೆಗೆ ವೇದಿಕೆ ಸಿದ್ಧಮಾಡಿಕೊಳ್ತಿದ್ದಾರೆ ರೆಬಲ್ಸ್..
ಸಭೆ ನಂತರ ಮಾತನಾಡಿದ ರೆಬಲ್ಸ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಭಾವಿಗಳೆಂದರೆ ದೊಡ್ಡ ನಾಯಕರಲ್ಲ ಪಕ್ಷದ ಸಾಮಾನ್ಯ ಕಾರ್ಯಕರ್ತ ಕೂಡ ಪ್ರಭಾವಿನೇ ಅಂತ ವಿಜಯೇಂದ್ರ ಗೆ ಟಾಂಗ್ ಕೊಟ್ಟಿದ್ದಾರೆ ಯತ್ನಾಳ್. SCP- TSPಯ 14 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಗಳಿಗೆ ಬಳಸಿದ್ದಾರೆ,
ಇದು ಅಕ್ಷಮ್ಯ ಅಪರಾಧ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಅದು.
ಜನರಲ್ ಗೆ ಹಣ ಹಂಚಿದ್ದಾರೆ ಇದೊಂದು ಕ್ರಿಮಿನಲ್ ಅಫೆನ್ಸ್ ಅದಕ್ಕೆ ನಾವೆಲ್ಲರೂ ಗವರ್ನರ್ ಗೆ ಮನವಿ ಮಾಡಿದ್ದೇವೆ. ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದೇವೆ, ಈ ಹಿಂದೆ ರಾಜ್ಯಾಧ್ಯಕ್ಷರು , ವಿರೋಧ ಪಕ್ಷದ ನಾಯಕರು ಗವರ್ನರ್ ಗೆ ಭಾರಿ ಮನವರಿಕೆ ಮಾಡಿಕೊಟ್ಟಿದ್ದಾರೆ. ನಾವು ಅಷ್ಟೇ ಭಾರಿ ಮನವರಿಕೆ ಮಾಡಿಕೊಟ್ಟಿದ್ದೇವೆ ಅಂತ ನಾವೇನು ಅವರಿಗಿಂತ ಕಡಿಮೆ ಅಲ್ಲ ಅನ್ನೋದನ್ನ ಪರೋಕ್ಷವಾಗಿ ಹೇಳಿದ್ದಾರೆ ಯತ್ನಾಳ್…
ಇದೇ ವಿಚಾರವಾಗಿ ಮಾತನಾಡಿದ ಮತ್ತೊಬ್ಬ ರೆಬಲ್ ನಾಯಕ ಅರವಿಂದ್ ಲಿಂಬಾವಳಿ ವಾಲ್ಮೀಕಿ ನಿಗಮದ ಹಗರಣವನದನು ಚುನಾವಣೆಗೆ ಬಳಸಿದ್ದಾರೆ. ಗ್ಯಾರಂಟಿ ಗಳಿಗೆ ಬಳಿಸಿರುವ 16 ಸಾವಿರ ಕೋಟಿ ಹಣ ದುರುಪಯೋಗ ಆಗಿದೆ ಎಂದು ದೂರು ಕೊಟ್ಟಿದ್ದೇವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ದದ್ದಲ್ ರನ್ನ ವಜಾ ಗೊಳಿಸಬೇಕು, ಇದೇ ವಿಚಾರವಾಗಿ ಬಳ್ಳಾರಿ ಪಾದಯಾತ್ರೆ ನಡೆಯುತ್ತದೆ. ಪಾದಯಾತ್ರೆ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ ನಮ್ಮ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತದೆ ಅನ್ನೋ ಮೂಲಕ ಪ್ರತ್ಯೇಕತೆಯ ಮಾತನಾಡಿದ್ದಾರೆ ಲಿಂಬಾವಳಿ…
ಒಟ್ನಲ್ಲಿ ನಿನ್ನೆ RSS ನಾಯಕರು ಸಂಧಾನ ಸಭೆ ಮಾಡಿ ಎಲ್ಲವೂ ಸರಿಹೋಯ್ತು ಅಂತ ಅಂದ್ಕೋಡಿದ್ರು, ಬೈಟೆಕ್ ನಲ್ಲಿ ನಾವು ಒಟ್ಟಾಗಿ ಇರ್ತೀವಿ ಅಂತ ಹೇಳಿ ಬಂದಿದ್ದ ರೆಬಲ್ಸ್ ಮಾರನೇ ದಿನವೇ ತಮ್ಮ ವರಸೆ ಬದಲಿಸಿದ್ದಾರೆ. ವಿಜಯೇಂದ್ರ ಟೀಂಗೆ ಸೆಡ್ಡು ಹೊಡೆದು ರಾಜ್ಯಾಪಾಲರಿಗೆ ವಾಲ್ಮೀಕಿ ವಿಚಾರವಾಗಿ ದೂರು ಕೊಟ್ಟು ಬಳ್ಳಾರಿ ಪಾದಯಾತ್ರೆಯನ್ನ ತಮ್ಮದೇ ನೇತೃತ್ವದಲ್ಲಿ ಮಾಡ್ತೀವಿ ಅನ್ನೋ ಮೂಲಕ ಸಂಘದ ಸಂಧಾನಕ್ಕೆ ಡೋಂಟ್ ಕೇರ್ ಅನ್ನೋದನ್ನ ಪರೋಕ್ಷವಾಗಿ ಮೆಸೇಜ್ ಪಾಸ್ ಮಾಡಿದ್ದಾರೆ…