ಬೆಂಗಳೂರು:- ಮಂಡ್ಯದಲ್ಲೇ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಲು ಸುಮಲತಾ ಸಿದ್ಧತೆ ನಡೆಸಿದ್ದು, ಮುಂದೇನು ಎಂಬ ಚಿಂತೆ ಕಾಡುತ್ತಿದೆ.
ಅಗತ್ಯವಿರುವೆಡೆ ಬೋರ್ವೆಲ್ ಕೊರೆಸಲು ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ!
ಸುಮಲತಾ ನಾಳೆ ಅಂದ್ರೆ ಏಪ್ರಿಲ್ 3 ರಂದು ತಮ್ಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಈಗ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ರಾಜಕೀಯದ ಭವಿಷ್ಯ ನಿರ್ಧರಿಸಲಿದೆ. ಅಂತಿಮವಾಗಿ, ಸೋಮಲಿತಾ ಅವರ ಬಳಿ ಇರುವ ಆಯ್ಕೆಗಳು ಯಾವುದು?
ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಪ್ರಬಲ ಹೋರಾಟ ನಡೆಸಿರುವುದು ಸುಮಲತಾ ಅವರ ಏಕೈಕ ಅನುಕೂಲವಾಗಿದೆ.
ಸುಮಲತಾ ಪಕ್ಷೇತರ ಸ್ಪರ್ಧೆಯಿಂದ ಧನಾತ್ಮಕ ಅಂಶಗಳಿಗಿಂತ ಹೆಚ್ಚು ನಕಾರಾತ್ಮಕ ಅಂಶಗಳಿವೆ. ಬಿಜೆಪಿ ಹೈಕಮಾಂಡ್ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದಲ್ಲದೆ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಗೆಲುವು ಕಷ್ಟ ಎಂಬ ಸತ್ಯ ಸುಮಲತಾ ಅರಿತಿದ್ದಾರೆ. ಈಗಾಗಲೇ ಬಿಜೆಪಿ ಮತ್ತು ಹೆಚ್ ಡಿಕೆ ಜೊತೆಗಿನ ಸಂಬಂಧ ಸುಧಾರಿಸಿಕೊಂಡಿರುವ ಇಂಡುವಾಳು ಸಚ್ಚಿದಾನಂದ ಸೇರಿದಂತೆ ಹಲವು ಸುಮಲತಾ ಬೆಂಬಲಿಗರು ಕೂಡ ದೂರವಾಗಲಿದ್ದಾರೆ.
ಅಷ್ಟೇ ಅಲ್ಲ, ಫಲಿತಾಂಶದಲ್ಲಿ ಹೆಚ್ಚು ವ್ಯತ್ಯಾಸವಾದರೆ ರಾಜಕೀಯ ಭವಿಷ್ಯವೇ ಮುಗಿಯುತ್ತದೆ ಎಂಬ ಆತಂಕವೂ ಇದೆ.
ಒಟ್ಟಾರೆ ಸುಮಲತಾ ಅವರು ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಹೆಚ್ಚಿನ ಕುತೂಹಲ ಮೂಡಿದೆ