ಬೆಳಗಾವಿ : ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ಕಿಡ್ನ್ಯಾಪ್ ಪ್ರಕರಣ ಸಂಬಂಧ ಬೆಳಗಾವಿ ಎಸ್.ಪಿ.ಭೀಮಾಶಂಕರ್ ಗುಳೇದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿನ್ನೆ ಶೋಭಾ ಅಂಬಿ ಬಂದು ಘಟಪ್ರಭಾ ಠಾಣೆಯಲ್ಲಿ ಕೇಸ್ ಕೊಟ್ಟಿದ್ದಾರೆ.
ದೂರಿನಲ್ಲಿ ಉಲ್ಲೇಖವಾಗಿರುವ ಅಂಶಗಳ ಮಾತನಾಡುತ್ತಾ, ಫೆ.14 ರಂದು ರಾತ್ರಿ ಸಾಂಗಲಿಯಿಂದ ವಾಪಸ್ ಬರುವಾಗ ನನ್ನೊಂದಿಗೆ ಮಾತನಾಡುತ್ತಾ ಕರೆ ಕಟ್ ಆಯ್ತು. ಫೆ.15ರಂದು ಪತಿ ಬಸವರಾಜ್ ಅಂಬಿ ಕರೆ ಮಾಡಿ ನನ್ನ ಕಿಡ್ನ್ಯಾಪ್ ಆಗಿದ್ದು, 5 ಕೋಟಿ ಹಣವನ್ನ ತೆಗೆದುಕೊಂಡು ನಿಪ್ಪಾಣಿಗೆ ಬರಲು ಹೇಳುತ್ತಾರೆ. ಆಗ ಶೋಭಾ ತನ್ನ ಪುತ್ರ ಹುಲಿರಾಜಗೆ 10 ಲಕ್ಷ ತೆಗೆದುಕೊಂಡು ನಿಪ್ಪಾಣಿಯ ರತ್ನಾ ಹೊಟೇಲ್ ಹತ್ತಿರ ಬರಲು ಹೇಳ್ತಾರೆ. ಹುಲಿರಾಜ್ ತನ್ನೊಂದಿಗೆ ನಾಲ್ಕೈದು ಜನರನ್ನ ತೆಗೆದುಕೊಂಡು ಹೋಗಿರುತ್ತಾನೆ. ಆಗ ಅದನ್ನ ಗಮನಿಸಿದ ಆರೋಪಿಗಳು ಅಲ್ಲಿಂದ ಹೊರಟು ಹೋಗ್ತಾರೆ. ಮತ್ತೆ ಫೆ.17 ರಂದು ಮತ್ತೆ ಕರೆ ಮಾಡಿ 5 ಕೋಟಿ ಹಣ ತೆಗೆದುಕೊಂಡು ಒಬ್ಬನೇ ಬರುವಂತೆ ಹೇಳ್ತಾರೆ. ವಿಡಿಯೋ ಕಾಲ್ ಮಾಡಿ ಬಸವರಾಜ್ ಕಿಡ್ನ್ಯಾಪ್ ಮಾಡಿದ ಆರೋಪಿಗಳು ಪತ್ನಿಗೆ ಖಚಿತ ಪಡಿಸಿದ್ದಾರೆ. ಇದನ್ನು ಅವರು ದೂರಿನಲ್ಲಿ ಇಲ್ಲೇಖಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.