ಬೆಂಗಳೂರು: ಲೋಕಸಭೆ ಎಲೆಕ್ಷನ್ ಹೊತ್ತಲ್ಲೇ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟ ಆಗ್ತಿದೆ. ಜಾತಿವಾರು ಮೂರು ಡಿಸಿಎಂ ಮಾಡಬೇಕು ಅಂತಾ ಘಟಾನುಘಟಿ ಸಚಿವರು ಡಿಮ್ಯಾಂಡ್ ಮಾಡ್ತಿದ್ದಾರೆ. ಇದು ಸಿದ್ದು ಅಂಡ್ ಡಿಕೆ ನಡುವೆ ಶೀತಲ ಸಮರಕ್ಕೂ ಕಾರಣವಾಗಿದೆ.. ಲೋಕಸಭೆ ಎಲೆಕ್ಷನ್ ಅಖಾಡಕ್ಕಿಯಲು ಸಿಎಂ ಆಪ್ತ ಸಚಿವರೆಲ್ಲಾ ಹಿಂದೇಟು ಹಾಕಿದ್ದಾರೆ.ಯೆಸ್.. ರಾಜ್ಯ ಕಾಂಗ್ರೆಸ್ ನಲ್ಲಿ ದಿನಕ್ಕೊಂದು ಸ್ಪೋಟಕ ಬೆಳವಣಿಗೆಗಳು ನಡೀತಾ ಇವೆ.. ಹೈಕಮಾಂಡ್ ಸೂಚಿಸಿದ್ರೆ ಲೋಕಸಭೆ ಎಲೆಕ್ಷನ್ ಗೆ ಸ್ಪರ್ಧೆ ಮಾಡ್ತೀವಿ ಅಂತಿದ್ದ ಸಚಿವರೆಲ್ಲಾ ಈಗ ಉಲ್ಟಾ ಹೊಡೆಯುತ್ತಿದ್ದಾರೆ.
India’s richest person: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
ಸಿದ್ದರಾಮಯ್ಯ ಆಪ್ತ ಬಣದಲ್ಲಿದ್ದ ಬಹುತೇಕ ಸಚಿವರನ್ನ ಲೋಕಸಭೆ ಎಲೆಕ್ಷನ್ ಗೆ ನಿಲ್ಲಿಸೋ ಸಂಬಂಧ, ಹೈಕಮಾಂಡ್ ಜೊತೆ ಡಿ.ಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರಂತೆ.. ಇದು ಸಿದ್ದು ಆಪ್ತರನ್ನ ಕೆರಳಿದೆ. ಮೊದಲೇ ಜಾತಿಗಣತಿ ವಿರೋಧ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ಡಿಕೆಶಿ, ಸಚಿವರ ಸ್ಪರ್ಧೆ ವಿಚಾರಕ್ಕೆ ಕೈ ಹಾಕಿದ್ದರಿಂದ ಹಲವರು ಕೊತ ಕೊತ ಅಂತಿದ್ದಾರೆ. ಹೀಗಾಗಿ ಡಿ.ಕೆ ಶಿವಕುಮಾರ್ ಪ್ರಾಬಲ್ಯ ಕುಗ್ಗಿಸಲು ಮೂರು ಡಿಸಿಎಂ ಅಸ್ತ್ರ ಬಿಟ್ಟಿದ್ದಾರೆ. ಈ ಮೂಲಕ ಕನಕ ಬಂಡೆಗೆ ಚೆಕ್ ಮೇಟ್ ಇಡಲು ಸಿದ್ದು ಬಣ ಮುಂದಾಗಿದೆ..