ಬೆಂಗಳೂರು: ನಟ ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆದಿದ್ದು, ತನಿಖಾಧಿಕಾರಿಗಳ ಪರವಾಗಿ ಹಿರಿಯ ವಕೀಲ ರಘುಪತಿ ವಾದ ಮಂಡಿಸಲಿದ್ದಾರೆ. ನವೆಂಬರ್ 18ರಂದು ಅಂದರೆ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಹಿರಿಯ ವಕೀಲ ರಘುಪತಿ ಮೇಲ್ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಹೈಕೋರ್ಟ್ ನಲ್ಲಿ ತನಿಖಾಧಿಕಾರಿಗಳ ಪರವಾಗಿ ವಾದ ಮಂಡಿಸಿದ್ದ ಎಸ್.ಪಿ.ಪಿ ಪ್ರಸನ್ನಕುಮಾರ್, ಮೇಲ್ಮನವಿ ಅರ್ಜಿಗೆ ಅಗತ್ಯವಾದ ಎಲ್ಲ ದಾಖಲೆ ಸಿದ್ದತೆ ಮಾಡಿದ್ದು, ಸುಪ್ರೀಂಕೋರ್ಟ್ ಮೇಲ್ಮನವಿಗೆ ಬೇಕಾದ ಅಗತ್ಯ ದಾಖಲಾತಿಗಳ ಭಾಷಾಂತರ ಕಾರ್ಯ ಕೂಡ ಮುಕ್ತಾಯಗೊಂಡಿದೆ.
European Union: Facebook ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ರೂ. ದಂಡ! ಕಾರಣ ಏನು ಗೊತ್ತಾ?
ಸದ್ಯ ಮೇಲ್ಮನವಿ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಫುಲ್ ಟೆನ್ಶನ್ ಆಗಿದ್ದಾರಂತೆ. ತನಿಖಾಧಿಕಾರಿಗಳು ಮೇಲ್ಮನವಿಗೆ ಸಿದ್ದತೆ ನಡೆಸುತ್ತಿರುವ ಬಗ್ಗೆ ವಕೀಲರ ಜೊತೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಚರ್ಚೆ ನಡೆಸಿದ್ದಾರೆ. ಸುಪ್ರೀಂಕೋರ್ಟ್ ಗೆ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಕೆಯಾದಲ್ಲಿ ಪ್ರತಿಯಾಗಿ ಯಾವೆಲ್ಲಾ ಅಂಶಗಳನ್ನು ಉಲ್ಲೇಖ ಮಾಡಬೇಕು. ಸದ್ಯದ ಆರೋಗ್ಯ ಸ್ಥಿತಿ, ಫಿಸಿಯೋಥೆರಪಿ ವರದಿ ಅಥವಾ ಆಪರೇಷನ್ ಗೊಳಗಾದ್ರೆ ಆಪರೇಷನ್ ನಂತರದ ಹೆಲ್ತ್ ರಿಪೋರ್ಟ್ ಸಲ್ಲಿಕೆ ಮಾಡೋವುದಾ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿರೋ ದರ್ಶನ್ ಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯಾದ್ರೆ ಜಾಮೀನು ರದ್ದಾಗುವ ಆತಂಕ ಶುರುವಾಗಿದೆ.