ಬೆಂಗಳೂರು: ಇಂದು ಬೆಳ್ಗೆಯಿಂದ ನಗರದಲ್ಲಿ ಪಿಎಸ್ ಐ ಮರು ಪರೀಕ್ಷೆ ನಡೆದಿದ್ದು ಸಂಜೆ ವೇಳೆಗೆ ಮುಕ್ತಾಯಗೊಂಡಿದೆ. 545 ಪಿಎಸ್ ಐ ಹುದ್ದೆಗಳ ಮರು ಪರೀಕ್ಷೆ ಮುಕ್ತಾಯ ಗೊಂಡಿದ್ದು ಇಂದು ಬೆಳಗ್ಗೆ 10 – 30 ರಿಂದ ಆರಂಭವಾಗಿದ್ದ ಪರೀಕ್ಷೆ ಸಂಜೆಗೆ ಅಂತ್ಯಗೊಂಡಿದೆ.
ಬೆಂಗಳೂರಿನ ಒಟ್ಟು 117 ಕೇಂದ್ರಗಳಲ್ಲಿ ಪಿಎಸ್ಐ ನೇಮಕಾತಿ ಮರು ಪರೀಕ್ಷೆಯು ನಡೆದಿದ್ದು ಈ ಹಿಂದೆ ನಡೆದ ಘಟನೆಗಳು ಮರುಕಳಿಸಬಾರದೆಂದು ಈ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು.
ಬೆಂಗಳೂರಿನಲ್ಲಿ 117 ಕೇಂದ್ರಗಳಲ್ಲಿ ಇಂದು ಪರೀಕ್ಷೆ ಮುಗಿಯುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲು ಆದೇಶದಲ್ಲಿ ಸೂಚಿಸಲಾಗಿತ್ತು. ಈ ಹಿಂದೆ ನಡೆದ ಘಟನೆಗಳು ಮರುಕಳಿಸಬಾರದೆಂದು ಈ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಸೂಚಿಸಿರುವಂತೆ ಅಭ್ಯರ್ಥಿಗಳು ವಸ್ತ್ರಸಂಹಿತೆಯನ್ನು ಪಾಲಿಸಬೇಕೆಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಅವರು ತಿಳಿಸಿದ್ದರು.