ಪ್ರಸ್ತುತ ನಡೆಯುತ್ತಿರುವ 2024ರ ಮಹಿಳಾ ಪ್ರೀಮಿಯರ್ ಲೀಗ್ 7ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನಾ ಮೊದಲು ಬೌಲಿಂಗ್ ನಿರ್ಧರಿಸಿದ್ದರು.
ಈ ವೇಳೆ ಆರ್ಸಿಬಿ ಆಟಗಾರ್ತಿಯರು ತಮ್ಮ ಭರ್ಜರಿ ಫೀಲ್ಡಿಂಗ್ ಮೂಲಕ ಪಂದ್ಯದ ರೋಚಕತೆಯನ್ನು ಕೆರಳಿಸಿದ್ದರು. ಅದರಲ್ಲೂ ಇನಿಂಗ್ಸ್ನ 10ನೇ ಓವರ್ನ ಮೂರನೇ ಎಸೆತದಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಫೀಲ್ಡಿಂಗ್ ಎಬಿ ಡಿವಿಲಿಯರ್ಸ್ ಅವರನ್ನು ನೆನಪಿಸಿತು.
Mohammed Shami: IPL ನಿಂದ ಹೊರಗುಳಿದ ಮೊಹಮ್ಮದ್ ಶಮಿ: ಗುಜರಾತ್ ಟೈಟಾನ್ಸ್ ತಂಡಕ್ಕೆ ಆಘಾತ
ಆರ್ಸಿಬಿ ಪರ ಇನಿಂಗ್ಸ್ನ 10ನೇ ಓವರ್ ಬೌಲ್ ಮಾಡಲು ಬಂದ ನಡಿನ್ ಡಿ ಕ್ಲರ್ಕ್ ಅವರನ್ನು ಅಲಿಸ್ಸಾ ಕ್ಯಾಪ್ಸೆ ತನ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಸ್ವಾಗತಿಸಿದರು. ಇದರ ನಂತರ, ಅವರು ಎರಡನೇ ಎಸೆತದಲ್ಲಿ ಒಂದು ರನ್ ತೆಗೆದುಕೊಂಡು ಶಫಾಲಿ ವರ್ಮಾಗೆ ಸ್ಟ್ರೈಕ್ ನೀಡಿದರು. ಶಫಾಲಿ ಓವರ್ನ ಮೂರನೇ ಎಸೆತದಲ್ಲಿ ಗಾಳಿಯಲ್ಲಿ ಲೆಂಗ್ತ್ ಬಾಲ್ ಅನ್ನು ಮಿಡ್-ವಿಕೆಟ್ ಕಡೆಗೆ ಹೊಡೆದರು.
ಜಾರ್ಜಿಯಾದ ಈ ಸ್ಟನಿಂಗ್ ಫೀಲ್ಡಿಂಗ್ ನೋಡಿ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕುಳಿತಿದ್ದ ಪ್ರೇಕ್ಷಕರೂ ಮಂತ್ರ ಮುಗ್ಧರಾದರು. ಈ ಮೂಲಕ ಜಾರ್ಜಿಯಾದ ಕಠಿಣ ಪ್ರಯತ್ನದಿಂದ ಆರ್ಸಿಬಿಗೆ ಒಟ್ಟು 4 ರನ್ಗಳು ಉಳಿಯಿತು. 2018ರ ಐಪಿಎಲ್ನಲ್ಲಿ ಎಬಿ ಡಿವಿಲಿಯರ್ಸ್ ಇದೇ ರೀತಿಯ ಫೀಲ್ಡಿಂಗ್ ಪ್ರದರ್ಶನ ತೋರಿದ್ದರು.