ಮುಂಬೈ ವಿರುದ್ಧದ ಸೋಲಿನ ಬೆನ್ನಲ್ಲೇ ಬೇಡದ ದಾಖಲೆ ಬರೆದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಂಬರ್ 1 ತಂಡ ಎಂಬ ಸಾಧನೆ ಮಾಡಿದೆ
ಆರ್ಸಿಬಿ ತಂಡವು ಆಡಿರುವ 6 ಪಂದ್ಯದಲ್ಲಿ ಕೇವಲ 1 ಪಂದ್ಯ ಗೆದ್ದು 5ರಲ್ಲಿ ಸೋಲುವ ಮೂಲಕ ಪ್ಲೇಆಫ್ ಹಾದಿಯನ್ನು ಇನ್ನಷ್ಟು ಕಠಿಣ ಮಾಡಕೊಂಡಿದೆ. ಮುಂದಿನ ಎಲ್ಲಾ ಪಂದ್ಯಗಳನ್ನು ಆರ್ಸಿಬಿ ಗೆದ್ದರೂ ಸಹ ಉಳಿದ ತಂಡಗಳ ಫಲಿತಾಂಶದ ಮೇಲೆ ಐಪಿಎಲ್ 17ನೇ ಸೀಸನ್ನ ಪ್ಲೇಆಫ್ ಭವಿಷ್ಯ ನಿಂತಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಕೇಸ್ – ಬಿಜೆಪಿ ವಿರುದ್ದ ಕೆಂಡಕಾರಿದ ಮಮತಾ ಬ್ಯಾನರ್ಜಿ!
ಇದರ ನಡುವೆ ಸತತ ಸೋಲಿನ ನಡುವೆ ಆರ್ಸಿಬಿ ತಂಡವು ಐಪಿಎಲ್ ನಲ್ಲಿ ಮತ್ತೊಂದು ಕೆಟ್ಟ ದಾಖಲೆಯನ್ನು ಬರೆದಿದೆ. ಈ ಮೂಲಕ ಈ ಬೇಡದ ದಾಖಲೆ ಬರೆದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಂಬರ್ 1 ತಂಡ ಎಂಬ ಸಾಧನೆ ಮಾಡಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಬೆಂಗಳೂರು ನೀಡಿದ 197 ರನ್ ಗಳ ಗುರಿಯನ್ನು ಮುಂಬೈ ಇನ್ನೂ 27 ಎಸೆತ ಬಾಕಿ ಇರುವಂತೆಯೇ ತಲುಪುವ ಮೂಲಕ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುವಾಗ ತಂಡದ ಮೂವರು ಅರ್ಧಶತಕ ಸಿಡಿಸಿದರೂ ಸಹ 200 ರನ್ ಗಡಿ ಮುಟ್ಟದ ತಂಡ ಎಂಬ ಬೇಡದ ದಾಖಲೆ ನಿರ್ಮಿಸಿದೆ
ಹೌದು, ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ನಾಯಕ ಫಾಫ್ ಡುಪ್ಲೇಸಿಸ್, ದಿನೇಶ್ ಕಾರ್ತಿಕ್ ಮತ್ತು ರಜತ್ ಪಾಟಿದಾರ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡುವ ಮೂಲಕ ಆಕರ್ಷಕ ಅರ್ಧಶತಕ ಸಿಡಿಸದ್ದರು. ಆದರೆ ಅಂತಿಮವಾಗಿ ತಂಡ 196 ರನ್ಗಳಿಗೆ ಸೀಮಿತವಾಯಿತು.
ಹೀಗಾಗಿ ಐಪಿಎಲ್ ಇತಿಹಾಸದಲ್ಲಿಯೇ ತಂಡದ ಪರ 3 ಜನ ಅರ್ಧಶತಕ ಸಿಡಿಸದರೂ 200 ರನ್ ಪೂರೈಸದ ಮೊದಲ ತಂಡ ಎಂಬ ಬೇಡದ ದಾಖಲೆ ನಿರ್ಮಿಸಿದೆ. ಆದರೆ ಅತ್ತ ಮುಂಬೈ ಐಪಿಎಲ್ ಇತಿಹಾಸದಲ್ಲಿಯೇ 3ನೇ ಬಾರಿಗೆ 190ಕ್ಕೂ ಹೆಚ್ಚು ರನ್ಗಳನ್ನು ಅತಿ ಕಡಿಮೆ ಎಸೆತದಲ್ಲಿ ಬೆನ್ನಟ್ಟಿದ ತಂಡ ಎಂಬ ದಾಖಲೆ ನಿರ್ಮಿಸಿದೆ.