ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹೈವೋಲ್ಟೇಜ್ ಕದನ ನಡೆಯುತ್ತಿದೆ.
Shivakumar: ಎಐಸಿಸಿಗೆ ದುಡ್ಡು ಕಳುಹಿಸುವ ಅವಶ್ಯಕತೆ ನಮಗಿಲ್ಲ – ಡಿಕೆ ಶಿವಕುಮಾರ್!
ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಹೊರಬಿದ್ದಿದೆ.
ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಇರಾದೆಯಲ್ಲಿವೆ. ಲೀಗ್ನಲ್ಲಿ ಆರ್ಸಿಬಿಗೆ ಇದು ಮೂರನೇ ಪಂದ್ಯವಾಗಿದ್ದರೆ, ಕೆಕೆಆರ್ಗೆ ಇದು ಎರಡನೇ ಪಂದ್ಯವಾಗಿದೆ. ಎರಡೂ ತಂಡಗಳು ಗೆಲುವಿನೊಂದಿಗೆ ಈ ಪಂದ್ಯಕ್ಕೆ ಕಾಲಿಡುತ್ತಿರುವುದರಿಂದ ಎರಡೂ ತಂಡಗಳು ತಮ್ಮ ಗೆಲುವಿನ ಲಯವನ್ನು ಮುಂದುವರೆಸಲು ಪ್ರಯತ್ನಿಸಲಿವೆ ಎನ್ನಲಾಗಿದೆ.