2024 ರಲ್ಲಿ ಆರ್ಸಿಬಿ ಹೊಸ ಅಧ್ಯಾಯವು ಶುರುವಾಗಿದೆ ಅಂತಾ ವಿರಾಟ್ ಕೊಹ್ಲಿ ಹೇಳಿದ್ದರು. ಅದರಂತೆ ಅಭಿಮಾನಿಗಳು ಕೂಡ ಈ ಸಾರಿ ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ, ಅನ್ನೋ ಖುಷಿಯಲ್ಲೇ ಇದ್ದರು. ಆದರೂ ಮ್ಯಾಚ್ ಗೆಲ್ಲೋದು ಬಿಡಿ, ಆರ್ಸಿಬಿ ಹ್ಯಾಟ್ರಿಕ್ ಸೋಲು ಕಂಡು ಬೆಚ್ಚಿ ಬಿದ್ದಿದೆ. ಇದೇ ಸಮಯದಲ್ಲಿ ಅಭಿಮಾನಿಗಳು ಕೂಡ ರೊಚ್ಚಿಗೆದ್ದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಗ್ಲೆನ್ ಮ್ಯಾಕ್ಸ್ವೆಲ್ ಆಡಿಸೋದು ಬೇಡ, ಬೇಡ ಅಂತಿದ್ದಾರೆ. ಈ ಸಮಯದಲ್ಲೇ ಸ್ಫೋಟಕ ಹೇಳಿಕೆ ಹೊರಬಿದ್ದಿದೆ.
ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್ಸಿಬಿ ಯಾವಾಗ ಹೀನಾಯ ಸೋಲು ಕಂಡು ಅಭಿಮಾನಿಗಳ ಭಾವನೆ ಕೆರಳಿಸಿತ್ತೊ, ಅಲ್ಲಿಂದಲೇ ಶುರುವಾಗಿತ್ತು ಆಕ್ರೋಶ. ಹೀಗಾಗಿಯೇ ಇದೀಗ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಮುಂದಿನ ಮ್ಯಾಚ್ನಲ್ಲಿ ಆಟ ಆಡಿಸಲ್ಲ. ಬದಲಾಗಿ ಅವರನ್ನು ಕೂರಿಸುತ್ತಾರೆ ಅಂತಿದ್ದಾರೆ ಅಕಾಶ್ ಚೋಪ್ರಾ. ಸಾಲು ಸಾಲು ಸೋಲುಗಳಿಂದ, ಆರ್ಸಿಬಿ ತಂಡ ಈಗ ಕಂಗೆಟ್ಟು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಸಿಬಿ ತಂಡದಲ್ಲಿ, ಬಹುಮುಖ್ಯ ಬದಲಾವಣೆ ಗ್ಯಾರಂಟಿ ಎನ್ನಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ, ಗ್ಲೆನ್ ಮ್ಯಾಕ್ಸ್ವೆಲ್ಗೆ ಮನೆ ದಾರಿ ತೋರಿಸುವುದು ಗ್ಯಾರಂಟಿ ಆಗುತ್ತಿದೆ.
ಗ್ಲೆನ್ ಮ್ಯಾಕ್ಸ್ವೆಲ್ 2023 ವಿಶ್ವಕಪ್ ಟೂರ್ನಿಯಲ್ಲಿ 128 ಬಾಲ್ನ ಆಡಿ ಅಫ್ಘಾನ್ ವಿರುದ್ಧ 201 ರನ್ ಗಳಿಸಿದ್ದರು. 21 ಬೌಂಡರಿ ಹಾಗೂ 10 ಸಿಕ್ಸರ್ ಚಚ್ಚಿದ್ದ ಇದೇ ಗ್ಲೆನ್ ಮ್ಯಾಕ್ಸ್ವೆಲ್ ಈಗ, ಆರ್ಸಿಬಿ ತಂಡಕ್ಕೆ ವಿಲನ್ ಆಗುತ್ತಿದ್ದಾರೆ ಅಂತಿದ್ದಾರೆ ಫ್ಯಾನ್ಸ್. ಈ ಆರೋಪಗಳ ನಡುವೆ, ಗ್ಲೆನ್ ಮ್ಯಾಕ್ಸ್ವೆಲ್ ಕುಡಿತಕ್ಕೆ ದಾಸರಾಗಿದ್ದಾರೆ. ವಿಪರೀತ ಕುಡಿತದ ಕಾರಣಕ್ಕೆ, ಗ್ಲೆನ್ ಮ್ಯಾಕ್ಸ್ವೆಲ್ ಏಕಾಗ್ರತೆ ಕಳೆದುಕೊಂಡಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಇದು ಒಂದು ಕಡೆ ಆದರೆ, ಮತ್ತೊಂದು ಕಡೆಗೆ ಗ್ಲೆನ್ ಮ್ಯಾಕ್ಸಿ ಅವರನ್ನು ಆರ್ಸಿಬಿ ತಂಡದಿಂದ ಕೈಬಿಡಲಿದೆ ಎಂಬ ಮಾಹಿತಿ ಓಡಾಡುತ್ತಿದೆ. ಆದರೆ ಇದು ಇನ್ನೂ ಅಧಿಕೃತವಾಗಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ.