ಇಶಾನ್ ಕಿಶಾನ್ ಮತ್ತು ರೋಹಿತ್ ಶರ್ಮಾ ಅವರು ಶತಕದ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ನಂತರ ಸೂರ್ಯಕುಮಾರ್ ಯಾದವ್ ಕೇವಲ 19 ಎಸೆತಗಳಲ್ಲಿ 52 ರನ್ ಬಾರಿಸಿದರು. ಅವರ ವೈಭವದ ಆಟದಿಂದ ಮುಂಬೈ ತಂಡ, ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಏಳು ವಿಕೆಟ್ಗಳಿಂದ ಸೋಲಿಸಿತು.
Gold price: ಚಿನ್ನದ ಬೆಲೆ ಮತ್ತಷ್ಟು ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ!
ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು ಮತ್ತು ಆರ್ಸಿಬಿಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರ್ಸಿಬಿ ತಂಡ ಆರಂಭಿಕ ಆಘಾತ ಎದುರಿಸಿದರೂ ಸಹ ನಾಯಕ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಮತ್ತು ರಜತ್ ಪಾಟಿದಾರ್ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಬೃಹತ್ ಸ್ಕೋರ್ ಕಲೆಹಾಕುವಲ್ಲಿ ಯಶಸ್ವಿಯಾದರು. ಈ ಮೂಲಕ ಅಂತಿಮವಾಗಿ ಆರ್ಸಿಬಿ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 196 ರನ್ ಸಿಡಿಸುವ ಮೂಲಕ ಮುಂಬೈ ಇಂಡಿಯನ್ಸ್ 197 ರನ್ಗಳ ಸವಾಲನ್ನು ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಯನ್ಸ್ ತಂಡವು 15.3 ಓವರ್ಗೆ 3 ವಿಕೆಟ್ ನಷ್ಟಕ್ಕೆ 199 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಜಯ ದಾಖಲಿಸಿತು.
ಇನ್ನು, ಆರ್ಸಿಬಿ ನೀಡಿದ 197 ರನ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ಸುಲಭವಾಗಿ ಗುರಿಯನ್ನು ಬೆನ್ನಟ್ಟಿತು. ಯಾವುದೇ ಹಂತದಲ್ಲಿಯೂ ಈ ಸ್ಕೋರ್ ದೊಡ್ಡ ಮೊತ್ತದ್ದು ಎಂದು ಯಾರಿಗೂ ಅನಿಸದ ರೀತಿಯಲ್ಲಿ ಮುಂಬೈ ಬ್ಯಾಟರ್ ಗಳು ಅಬ್ಬರಿಸಿದರು. ಈ ವೇಳೆ ಇಶಾನ್ ಕಿಶನ್ 34 ಎಸೆತದಲ್ಲಿ 5 ಸಿಕ್ಸ್, 7 ಫೋರ್ ಮೂಲಕ 69 ರನ್, ರೋಹಿತ್ ಶರ್ಮಾ 3 ಸಿಕ್ಸ್, 3 ಬೌಂಡರಿ ಮೂಲಕ 38 ರನ್, ಸೂರ್ಯಕುಮಾರ್ ಯಾದವ್ 19 ಎಸೆತದಲ್ಲಿ 4 ಸಿಕ್ಸ್ ಮತ್ತು 5 ಫೋರ್ ಮೂಲಕ 52 ರನ್ ಸಿಡಿಸುವ ಮೂಲಕ ಮುಂಬೈ ತವರಿನಲ್ಲಿ ಸತತ 2ನೇ ಗೆಲುವನ್ನು ಕಂಡಿದೆ.
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 9 ಎಸೆತದಲ್ಲಿ ಕೇವಲ 3 ರನ್ ಗಳಿಸಿ ಬುಮ್ರಾ ಎಸೆತದಲ್ಲಿ ಪೆವೆಲಿಯನ್ ಸೇರಿದರು. ಬಳಿಕ ಪದಾರ್ಪಣಾ ಪಂದ್ಯದಲ್ಲಿ ವಿಲ್ ಜಾಕ್ಸ್ ಸಹ 6 ಎಸೆತದಲ್ಲಿ 2 ಬೌಂಡರಿ ಸಹಿತ 8 ರನ್ ಸಿಡಿಸಿ ಔಟ್ ಆದರು. ಇದಾದ ಬಳಿಕ ಒಂದಾದ ನಾಯಕ ಫಾಫ್ ಡುಪ್ಲೇಸಿಸ್ ಮತ್ತು ರಜತ್ ಪಾಟಿದಾರ್ ಭರ್ಜರಿ ಬ್ಯಾಟಿಂಗ್ ಮಾಡಿದರು
ಆರ್ಸಿಬಿ ಪರ ಆಡುವಾಗ ಫಾಫ್ ಡು ಪ್ಲೆಸಿಸ್ 40 ಎಸೆತದಲ್ಲಿ 3 ಸಿಕ್ಸ್, 4 ಫೊರ್ ಮೂಲಕ 61 ರನ್, ರಜತ್ ಪಾಟಿದಾರ್ 26 ಎಸೆತದಲ್ಲಿ 44 ಸಿಕ್ಸ್ ಮತ್ತು 3 ಬೌಂಡರಿ ಸಹಿತ 50 ರನ್ ಮತ್ತು ದಿನೇಶ್ ಕಾರ್ತಿಕ್ ಅಜೇಯ ಕೇವಲ 23 ಎಸೆತದಲ್ಲಿ 4 ಸಿಕ್ಸ್ ಮತ್ತು 5 ಫೋರ್ ಮೂಲಕ 53 ರನ್ ಗಳಿಸಿ ಅಬ್ಬರಿಸಿದರು. ಆದರೆ ಮತ್ತದೇ ಡಕೌಟ್ ಆಗುವ ಮೂಲಕ ಗ್ಲೇನ್ ಮ್ಯಾಕ್ಸ್ವೆಲ್ ನಿರಾಸೆ ಮೂಡಿಸಿದರು. ಇವರಂತೆ ಮಹಿಪಾಲ್ ಲೋಮ್ರೋರ್ ಸಹ ಶೂನ್ಯಕ್ಕೆ ವಾಪಸ್ಸಾದರೆ, ಸೌರವ್ ಚೌಹಾಣ್ 9 ರನ್, ವೈಶಾಕ್ ವಿಜಯ್ ಕುಮಾರ್ ಶೂನ್ಯ ಮತ್ತು ಆಕಾಶ್ ದೀಪ್ 2 ರನ್ ಸಿಡಿಸಿದರು.