ಮೇ. 18 ರಂದು ನಡೆಯುವ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್ಸಿಬಿ ಗೆಲ್ಲಲೇಬೇಕಿದೆ. ಚೆನ್ನೈ ತಂಡಕ್ಕೂ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಈ ಪಂದ್ಯ ಹೇಗಾದ್ರೂ ಗೆಲ್ಲಲೇಬೇಕು ಎಂದು ಆರ್ಸಿಬಿ ಎಲ್ಲಾ ರೀತಿ ತಯಾರಿ ನಡೆಸಿಕೊಂಡಿದೆ. ತನ್ನ ತವರು ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲೇ ಚೆನ್ನೈ ವಿರುದ್ಧ ರಣಕಹಳೆ ಮೊಳಗಿಸಲು ಮುಂದಾಗಿದೆ.
ಹೊಟ್ಟೆ ಬೊಜ್ಜು ಕರಗಿಸಲು ನಿತ್ಯ ಈ ಜ್ಯೂಸ್ ಕುಡಿಯಿರಿ.. ರಿಸಲ್ಟ್ ಗ್ಯಾರಂಟಿ!
ಇನ್ನು, ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಆರ್ಸಿಬಿ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ. ಮಳೆಯಿಂದ ಪಂದ್ಯ ರದ್ದಾದ್ರೆ ಆರ್ಸಿಬಿಗೆ 1 ಅಂಕ ಸಿಗಲಿದ್ದು, ಇದರಿಂದ ಯಾವುದೇ ಉಪಯೋಗ ಇಲ್ಲ. ಬದಲಿಗೆ ಮಳೆ ನಿಂತರೆ ಎಂದಿನಂತೆ 7:30ಕ್ಕೆ ಪಂದ್ಯ ಆರಂಭವಾಗುತ್ತದೆ. ಒಂದು ವೇಳೆ ಆಗದಿದ್ದರೆ ಪಂದ್ಯದ ಕಟ್ಆಫ್ ಸಮಯ 11:50ರ ವರೆಗೆ ಪಂದ್ಯ ಆಯೋಜಿಸಲು ಸಾಧ್ಯವೇ ಎಂದು ನೋಡುತ್ತಾರೆ. ಒಂದು ವೇಳೆ ಸರಿಯಾದ ಸಮಯದೊಳಗೆ 20 ಓವರ್ ಮುಗಿಸಲು ಸಾಧ್ಯವಾಗುವುದಿಲ್ಲ ಎಂದು ಅನಿಸಿದರೆ ಓವರ್ ಕಡಿಮೆ ಮಾಡಲಾಗುತ್ತದೆ. ಮಳೆ ಬಂದರೆ DLS ನಿಯಮ, ಜಾರಿಗೆ ಬರುತ್ತದೆ. ಇದರ ಪ್ರಕಾರ ಓವರ್ ಕಡಿತದ ಜೊತೆಗೆ ಟಾರ್ಗೆಟ್ ಸಹ ನೀಡಲಾಗುತ್ತದೆ. ಹೀಗಾದ್ರೂ ಆರ್ಸಿಬಿ ಒಟ್ಟು ಗೆಲ್ಲಲೇಬೇಕು.
ಆದರೆ ಚೆನ್ನೈ ವಿರುದ್ಧ RCB 100 ಶೇ. 90 ರಷ್ಟು ಗೆಲ್ಲುವ ವಿಶ್ವಾಸ ಇದೆ.