IPL 2025ರ ಆರಂಭಕ್ಕೆ ಇನ್ನೇನು ಎರಡು ತಿಂಗಳು ಮಾತ್ರ ಬಾಕಿ ಇದೆ. 2025ರ ಮೆಗಾ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗುತ್ತಿದೆ. ಕಳೆದ ಬಾರಿ ಆರ್ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೋಫಿ ಮೊಲಿನೆಕ್ಸ್ ತೀವ್ರವಾಗಿ ಗಾಯಗೊಂಡ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದು ಶಾಕಿಂಗ್ ನ್ಯೂಸ್ ಆಗಿದ್ದು, ಇವರ ಜಾಗಕ್ಕೆ ಸ್ಟಾರ್ ಪ್ಲೇಯರ್ ಎಂಟ್ರಿ ಆಗಿದ್ದಾರೆ
ವಿಜಯಪುರದಲ್ಲಿ ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ಕಾರ್ಮಿಕ ಸಚಿವರು ಹೇಳಿದ್ದೇನು..?
ಇನ್ನು, ಸೋಫಿ ಮೊಲಿನೆಕ್ಸ್ ಬದಲಿಗೆ ಇಂಗ್ಲೆಂಡ್ ಆಫ್ಸ್ಪಿನ್ನರ್ ಚಾರ್ಲಿ ಡೀನ್ ಆರ್ಸಿಬಿ ತಂಡವನ್ನು ಸೇರಿದ್ದಾರೆ. ಈ ಬಗ್ಗೆ ಆರ್ಸಿಬಿ ತನ್ನ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಅಧಿಕೃತ ಘೋಷಣೆ ಹೊರಡಿಸಿದೆ. ಇದು ಆರ್ಸಿಬಿ ಫ್ಯಾನ್ಸ್ಗೆ ಗುಡ್ನ್ಯೂಸ್ ಆಗಿದೆ.
ಕಳೆದ ಸೀಸನ್ನಲ್ಲಿ ಆರ್ಸಿಬಿ ಚಾಂಪಿಯನ್ ಆಗಿತ್ತು. ಆರ್ಸಿಬಿ ಚಾಂಪಿಯನ್ ಆಗಲು ಸೋಫಿ ಮೊಲಿನೆಕ್ಸ್ ಕೊಡುಗೆ ಬಹಳ ಇತ್ತು. ಟೂನಿಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರು ಮೊಲಿನೆಕ್ಸ್. ಮುಂದಿನ ಸೀಸನ್ನಲ್ಲೂ ಇವರು ಮಿಂಚುವ ನಿರೀಕ್ಷೆಯಿತ್ತು. ಆದರೆ, ಮೊಣಕಾಲಿನ ಗಾಯದಿಂದಾಗಿ ಬಳಲುತ್ತಿರೋ ಇವರು ಟೂರ್ನಿಯಿಂದ ಹೊರಬಿದ್ದಿದ್ದಾರೆ.
24 ವರ್ಷದ ಚಾರ್ಲಿ ಡೀನ್ ಅವರನ್ನು 30 ಲಕ್ಷ ನೀಡಿ ಆರ್ಸಿಬಿ ಒಪ್ಪಂದ ಮಾಡಿಕೊಂಡಿದೆ. ಇವರು ಆಫ್ಸ್ಪಿನ್ನರ್ ಆಗಿದ್ದು, ಇಂಗ್ಲೆಂಡ್ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ