ಮುಂದಿನ ವರ್ಷ ನಡೆಯಲಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಈಗಿನಿಂದಲೇ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಆಟಗಾರರ ಮೆಗಾ ಹರಾಜು. ಈ ಬಾರಿ ಬಿಸಿಸಿಐ ಹೊಸ ಧಾರಣ ನೀತಿ ಜಾರಿಗೊಳಿಸಿರುವ ಕಾರಣ ಬಹುತೇಕ ತಂಡಗಳು ಕೆಲವು ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಹರಾಜಿಗೆ ಬಿಡುಗಡೆ ಮಾಡಿವೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಆಟಗಾರರು ಹರಾಜಿನಲ್ಲಿದ್ದಾರೆ.
Muniyappa: ಪಡಿತರ ಚೀಟಿ ರದ್ದು ವಿಚಾರ: ಸಚಿವ ಮುನಿಯಪ್ಪ ಹೇಳಿದ್ದೇನು ಗೊತ್ತಾ!?
ಪಂಜಾಬ್ ಕಿಂಗ್ಸ್ ನಿಂದ ಹೊರ ಬಂದಿರುವ ಟೀಂ ಇಂಡಿಯಾದ ಸ್ಟಾರ್ ವೇಗಿ ಅರ್ಷದೀಪ್ ಅವರನ್ನು ಖರೀದಿಸಲು ಆರ್ಸಿಬಿ ಪ್ಲಾನ್ ಮಾಡಿಕೊಂಡಿದ್ಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಆದರೆ ಆರ್ಸಿಬಿ ಯುವ ವೇಗಿಯನ್ನು ಖರೀದಿಸಲಿದೆ. ಆದರೆ ಅರ್ಷದೀಪ್ರನ್ನು ಖರೀದಿಸಲು ಎಲ್ಎಸ್ಜಿ ಕೂಡ ಹೊಂಚು ಹಾಕಿದೆ ಎನ್ನಲಾಗಿದೆ.
ಒಂದು ವೇಳೆ ಹಾಗೇನಾದರು ಆದರೆ ಅರ್ಷದೀಪ್ ಸಿಂಗ್ ದಾಖಲೆಯ ಮೊತ್ತಕ್ಕೆ ಬಿಡ್ ಆಗಲಿದ್ದಾರೆ. ಅರ್ಷದೀಪ್ ಅವರು, 2024ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು. ಪಂಜಾಬ್ ಇಬ್ಬರನ್ನು ಮಾತ್ರ ಉಳಿಸಿಕೊಂಡಿದೆ. ಶಶಾಂಕ್ ಸಿಂಗ್, ಪ್ರಭ್ ಸಿಮ್ರಾನ್ ಸಿಂಗ್ರನ್ನು ರಿಟೈನ್ಡ್ ಮಾಡಿಕೊಂಡಿದೆ. ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್ರನ್ನೂ ಕೈಬಿಟ್ಟಿದೆ.