ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ತವರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರೋಚಿತ ಸೋಲು ಕಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಹಾಗೂ ಎಸ್ಆರ್ಹೆಚ್ ತಂಡಗಳ ನಡುವಿನ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 25 ರನ್ಗಳ ಗೆಲುವು ಸಾಧಿಸಿದೆ.
ಗೋಲ್ಡ್ ಪ್ರಿಯರಿಗೆ ಶಾಕ್: ಚಿನ್ನ, ಬೆಳ್ಳಿ ಬೆಲೆ ಹೆಚ್ಚಳ ಮುಂದುವರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ!
ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಬೀಸಿದ ಎಸ್ಆರ್ಹೆಚ್ ತಂಡ ನಿಗದಿತ ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ಆರ್ಸಿಬಿಗೆ 288 ರನ್ಗಳ ಗುರಿ ನೀಡಿತು. ಈ ಮೂಲಕ ನಿಗದಿತ ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ಕೆಕೆಆರ್ ದಾಖಲೆ ಉಡೀಸ್ ಮಾಡಿದೆ. ಈ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ಗಳನ್ನು ಮಾತ್ರ ಕಲೆ ಹಾಕಲು ಸಾಧ್ಯವಾಯಿತು.
ಆರ್ಸಿಬಿ ಪರ ಬ್ಯಾಟ್ ಬೀಸಿದ ಕೊಹ್ಲಿ 20 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು. 4 ಎಸೆತಗಳಲ್ಲಿ 7 ರನ್ ಗಳಿಸಿದ ವಿಲ್ ಜಾಕ್ವೆಸ್ ಮತ್ತೊಂದು ರನ್ ಗಳಿಸುವ ಯತ್ನದಲ್ಲಿ ರನ್ ಔಟ್ ಆದರು. ಸೌರವ್ ಚೌಹಾಣ್ ಕೇವಲ ಒಂದೇ ಎಸೆತಕ್ಕೆ ಡಕ್ ಔಟ್ ಆದರು. ರಜತ್ ಪಾಟಿದಾರ್ 5 ಎಸೆತಗಳಲ್ಲಿ 9 ರನ್ ಕಲೆ ಹಾಕಿ ಪೆವಿಲಿಯನ್ಗೆ ಮರಳಿದರು. ನಾಯಕ ಫಾಫ್ ಡುಪ್ಲೆಸಿಸ್ 28 ಎಸೆತಗಳಲ್ಲಿ 7 ಬೌಂಡರಿ 4 ಸಿಕ್ಸ್ ಸಿಡಿಸಿ 62 ರನ್ಗಳನ್ನು ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಮಹಿಪಾಲ್ ಲೊಮ್ರೋರ್ 11 ಎಸೆತಗಳಿಗೆ 19 ರನ್ ಗಳಿಸಿ ಔಟಾದರು. 35 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 5 ಬೌಂಡರಿ ಸಿಡಿಸಿದ ದಿನೇಶ್ ಕಾರ್ತಿಕ್ 83 ರನ್ ಗಳಿಸಿ ಶತಕ ವಂಚಿತರಾದರು. ಅರ್ಜುನ್ ರಾವತ್ 14 ಎಸೆತಗಳಲ್ಲಿ 25 ಹಾಗೂ ವಿಜಯಕುಮಾರ್ ವೈಶಾಕ್ 2 ಎಸೆತಗಳಲ್ಲಿ ಒಂದು ರನ್ ಕಲೆಹಾಕಿದರು.