ಮುಂಬೈ: ಮುಂದಿನ ನವೆಂಬರ್-ಡಿಸೆಂಬರ್ನಲ್ಲಿ 2025ರ ಐಪಿಎಲ್ ಟೂರ್ನಿಗೆ ಮೆಗಾ ಹರಾಜು ನಡೆಯುವ ಸಾಧ್ಯತೆಗಳಿವೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಮೊಹಮ್ಮದ್ ಕೈಫ್, ಐಪಿಎಲ್ ಆರಂಭದಿಂದ ಈವರೆಗೆ ಸ್ಪರ್ಧೆಯಲ್ಲಿದ್ದರೂ ಒಮ್ಮೆಯೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025 ಟೂರ್ನಿಯ ಮೆಗಾ ಆಕ್ಷನ್ನಲ್ಲಿ ರೋಹಿತ್ ಶರ್ಮಾ ಅವರನ್ನು ಖರೀದಿ ಮಾಡಿ, ಅವರಿಗೆ ಕ್ಯಾಪ್ಟನ್ಸಿ ಕೊಡಬೇಕು ಎಂದು ಮಹತ್ವದ ಸಲಹೆ ನೀಡಿದ್ದಾರೆ.
ಅಂದಹಾಗೆ ಐಪಿಎಲ್ ಅಖಾಡದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ದಾಖಲೆಯ 5 ಬಾರಿ ಟ್ರೋಫಿ ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ ಇದೀಗ ತಂಡ ತೊರೆಯುವ ಸಾಧ್ಯತೆ ಇದೆ. 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆದ ರೋಹಿತ್ ಶರ್ಮಾ, ತಂಡಕ್ಕೆ 5 ಬಾರಿ ಟ್ರೋಫಿ ಗೆದ್ದುಕೊಟ್ಟರು. ಆದರೂ ಐಪಿಎಲ್ 2024 ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಚ್ಚರಿಯ ನಿರ್ಧಾರ ತೆಗೆದುಕೊಂಡು ರೋಹಿತ್ ಅವರಿಂದ ಕ್ಯಾಪ್ಟನ್ಸಿ ಕಸಿದು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಒಪ್ಪಿಸಿತು.
ನಿಮಗೆ ಗೊತ್ತೆ..? ಇದೇ ಕಾರಣಕ್ಕೆ ಮಹಿಳೆಯರಲ್ಲಿ “ಸೆಕ್ಸ್” ವೇಳೆ ನೋವು ಕಾಣಿಸಿಕೊಳ್ಳುವುದು!
ಇದರಿಂದ ಬೇಸರಗೊಂಡಿರುವ ರೋಹಿತ್ ತಂಡ ತೊರೆಯುವ ಸಾಧ್ಯತೆ ಹೆಚ್ಚಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ನೀಡಿ, ಐಪಿಎಲ್ 2024 ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆದಿತ್ತು. ಹೀಗಾಗಿ ರೋಹಿತ್ ಒಂದು ವೇಳೆ ಮುಂಬೈ ಇಂಡಿಯನ್ಸ್ ತೊರೆದರೆ ಆರ್ಸಿಬಿ ಈ ಅವಕಾಶವನ್ನು ಬಿಟ್ಟುಕೊಡಬಾರದು ಎಂದು ಕೈಫ್ ಹೇಳಿದ್ದಾರೆ.
ಯಾವುದೇ ಆಟಗಾರ ಕೂಡ ಕಳಪೆ ಲಯ ಕಾಣಬಹುದು. ಆದರೆ, ರೋಹಿತ್ ಶರ್ಮಾ ತಮ್ಮ ಆಟಗಾರರಲ್ಲಿ ಶ್ರೇಷ್ಠ ಪ್ರದರ್ಶನ ಹೊರತರುವ ಸಾಮರ್ಥ್ಯ ಹೊಂದಿದ್ದಾರೆ. ಹರಾಜಿನಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರನ್ನು ಖರೀದಿ ಮಾಡಬೇಕು. ಈ ಅವಕಾಶದ ಸದ್ಬಳಕೆ ಮಾಡಿ ರೋಹಿತ್ ಶರ್ಮಾ ಸೇವೆಯನ್ನು ಪಡೆದು ಅವರಿಗೆ ಕ್ಯಾಪ್ಟನ್ಸಿ ನೀಡಬೇಕು,” ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.