ಬೆಂಗಳೂರು:- ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಸಪ್ಲೆ ಮಾಡಿದ ಡಿಜೆ ಹಳ್ಳಿ ಪೆಡ್ಲರ್ ನನ್ನು ಅರೆಸ್ಟ್ ಮಾಡಲಾಗಿದೆ.
ತುಮಕೂರು: ಅಂಗಡಿಗಳಲ್ಲಿ ಸಿಗುತ್ತಿದೆ ಕ್ಷೀರಭಾಗ್ಯ ಯೋಜನೆಯ ಹಾಲುಪುಡಿ ಪ್ಯಾಕೇಟ್..
ಇಮಾರ್ ಶರೀಫ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈತ ಹೈಟೆಕ್ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ. ಡ್ರಗ್ಸ್ ಸಹಿತ ಬರುವಂತೆ ಶರೀಫ್ಗೆ ತಿಳಿಸಲಾಗಿತ್ತು. ಅದ್ರಂತೆ ವಿವಿಧ ಮಾದರಿಯ ಡ್ರಗ್ಸ್ ತೆಗೆದುಕೊಂಡು ಈತ ಪಾರ್ಟಿಗೆ ಬಂದಿದ್ದ. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರೇವ್ ಪಾರ್ಟಿಯಲ್ಲಿ ಆಯೋಜಕರ ಮೂಲಕ ಡ್ರಗ್ಸ್ ನೀಡಲಾಗಿತ್ತು. ಆರೋಪಿ ಶರೀಫ್ ಬಳಿ ನಲವತ್ತು ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ. ಸದ್ಯ ಶರೀಫ್ ಅರೆಸ್ಟ್ ಮಾಡಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ನೋಟಿಸ್ಗೆ ಹಾಜರಾಗದವರಿಗೆ ಸಂಕಷ್ಟ ಎದುರಾಗಲಿದೆ. ಪಾರ್ಟಿಯಲ್ಲಿ ಹಾಜರಾಗಿ ಡ್ರಗ್ಸ್ ಸೇವನೆ ಹಿನ್ನಲೆ ತೆಲುಗು ನಟಿ ಹೇಮಾ, ಆಶಿ ರಾಯ್ ಸೇರಿ ಇದುವರೆಗೆ ಇಪತ್ತಕ್ಕೂ ಹೆಚ್ಚು ಜನರಿಗೆ ಸಿಸಿಬಿ ನೋಟಿಸ್ ನೀಡಿದೆ. ಆದರೆ ಯಾರು ಕೂಡ ಇದುವರೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಸಿಸಿಬಿ ನ್ಯಾಯಾಲಯದ ಮೋರೆ ಹೋಗಲಿದೆ. ವಿಚಾರಣೆಗೆ ಹಾಜರಾಗದ ವ್ಯಕ್ತಿಗಳ ವಿರುದ್ದ ಅರೆಸ್ಟ್ ವಾರಂಟ್ ಪಡೆದು ಬಂಧಿಸಲು ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಗೆ ಬರೋಬ್ಬರಿ 50 ಲಕ್ಷ ಖರ್ಚು ಮಾಡಲಾಗಿತ್ತಂತೆ. ಹೈದರಾಬಾದ್ನ ವಾಸು ಬರ್ತ್ಡೇ ಹೆಸರಲ್ಲಿ ನಡೆದ ಪಾರ್ಟಿಯಲ್ಲಿ 100ರಿಂದ 150ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರು ಭಾಗಿಯಾಗಿದ್ರು ಅಂತಾ FIRನಲ್ಲಿ ದಾಖಲಿಸಲಾಗಿದೆ. ಇನ್ನು ಪಾರ್ಟಿಯಲ್ಲಿಯೇ ಡ್ರಗ್ಸ್ ಮರಾಟ ಮಾಡ್ತಿದ್ದ ಸಿದ್ದಿಕ್, ರಣ್ ದೀರ್, ರಾಜ್ ಭಾವ ಎಂಬುವವರನ್ನ ಬಂಧಿಸಲಾಗಿದೆ. ಸದ್ಯ ದಾಳಿ ವೇಳೆ ಪತ್ತೆಯಾದವರ ಬಿಟ್ಟು ಉಳಿದವರ ಮಾಹಿತಿ ಸಂಗ್ರಹಕ್ಕೆ ಸಿಸಿಬಿ ಮುಂದಾಗಿದೆ