ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿಆರ್ ಫಾರ್ಮ್ಹೌಸ್ನಲ್ಲಿ ನಡೆದಿದ್ದ ‘ರೇವ್ ಪಾರ್ಟಿ’ ಪ್ರಕರಣದ ವಿಚಾರಣೆಗೆ ಗೈರಾಗಿರುವ ತೆಲುಗು ಸಿನಿಮಾ ನಟಿ ಹೇಮಾ ಸೇರಿದಂತೆ ಇತರರು ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿ ಸಿಸಿಬಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್ ಸೇವಿಸಿರುವ ಪ್ರಕರಣದ ವಿಚಾರಣೆಗೆ ಸೋಮವಾರ ಹಾಜರಾಗುವಂತೆ ನಟಿ ಹೇಮಾ ಸೇರಿ ಎಂಟು ಮಂದಿಗೆ ಸಿಸಿಬಿ ನೋಟಿಸ್ ನೀಡಿತ್ತು.
ಸಿಸಿಬಿ ನೋಟಿಸ್ಗೆ ಪ್ರತಿಕ್ರಿಯಿಸಿರುವ ನಟಿ ಹೇಮಾ ಹಾಗೂ ಇತರರು, ‘ಹಲವು ಕಾರಣಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. 7 ದಿನಗಳ ನಂತರ ವಿಚಾರಣೆಗೆ ಹಾಜರಾಗಲಿದ್ದು, ಅಲ್ಲಿವರೆಗೂ ಕಾಲಾವಕಾಶ ನೀಡಬೇಕೆಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ’ ಎಂಬುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ
ಜಿಆರ್ ಫಾರ್ಮ್ ಹೌಸ್ನಲ್ಲಿ ಮೇ 19ರಂದು ರಾತ್ರಿ ನಡೆದ ‘ಸನ್ಸೆಟ್ ಟು ಸನ್ರೈಸ್’ ಹೆಸರಿನ ರೇವ್ ಪಾರ್ಟಿಯಲ್ಲಿ ನಟಿಯರಾದ ಹೇಮಾ, ಆಶಿ ರಾಯ್ ಸೇರಿದಂತೆ 103 ಮಂದಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 103 ಮಂದಿಯ ರಕ್ತದ ಮಾದರಿ ಪರೀಕ್ಷಿಸಿದ್ದು, ನಟಿ ಹೇಮಾ ಸೇರಿದಂತೆ 86 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಇವರೆಲ್ಲರನ್ನೂ ವಿಚಾರಣೆ ನಡೆಸಲು ಸಿಸಿಬಿ ಮುಂದಾಗಿದೆ.