ಬಹುತೇಕರ ಮನೆಯಲ್ಲಿ ಇಲಿಗಳ ಕಾಟವಿದೆ. ಇಲಿಗಳು ಅಡುಗೆ ಸಾಮಾಗ್ರಿಗಳನ್ನು ಹಾಳು ಮಾಡುವುದು ಮಾತ್ರವಲ್ಲ, ಕಪಾಟಿನಲ್ಲಿಟ್ಟಿರುವ ಬಟ್ಟೆಗಳನ್ನೂ ಛಿದ್ರ ಛಿಧ್ರಗೊಳಿಸುತ್ತದೆ. ಅದರಲ್ಲೂ ನೀವೇನಾದ್ರೂ ಮನೆಯಲ್ಲಿ ಕಾರ್ ಪಾರ್ಕ್ ಮಾಡಿದ್ದರೆ ಕಾರಿನ ಒಳಭಾಗಕ್ಕೆ ಹೋಗಿ ಸೀಟು ಹರಿದು ಹಾಕುತ್ತದೆ, ವಯರ್ ಕಟ್ ಮಾಡಿ ಹಾಕುತ್ತದೆ. ಹಾಗಾಗಿ ಇಲಿಗಳ ಕಾಟದಿಂದ ಒಮ್ಮೆ ಮುಕ್ತಿ ಸಿಕ್ಕಿದ್ರೆ ಸಾಕು ಎಂದನಿಸುವುದು ಸಹಜ
ಬಿಗ್ ಬಾಸ್ ಮನೆಯಲ್ಲಿ ಹನುಮ ಸ್ಥಾನ ಮಾಡಿ 3 ದಿನ ಆಯ್ತಂತೆ: ಸ್ವಚ್ಚ ಕಾಪಾಡುವಂತೆ ಮನೆಮಂದಿ ಮನವಿ!
ಇಲಿಗಳು ಮನೆಗೆ ಬರುವುದನ್ನು ತಡೆಯಲು ನಾನಾ ಬಗೆಯ ಪ್ರಯೋಗಗಳನ್ನು ಮಾಡುತ್ತೇವೆ ಅದರಲ್ಲೂ ಪ್ರಮುಖವಾಗಿ, ರಂಧ್ರಗಳು ಮತ್ತು ಬಾಗಿಲಿನ ಸಮೀಪವಿರುವ ಖಾಲಿ ಜಾಗ ಮುಚ್ಚುವುದು ಸೇರಿ ಅನೇಕ ಪ್ರಯೋಗ ಮಾಡಿದರೂ ಕೂಡ ಇಲಿಗಳು ಮನೆಗೆ ಎಂಟ್ರಿ ಕೊಡುತ್ತವೆ. ಆದ್ರೆ ಮನೆಯ ಮುಂಭಾಗದಲ್ಲಿ ಕೆಲವು ಗಿಡಗಳನ್ನು ನೆಡುವುದರಿಂದಲೂ ಮನೆಗೆ ಇಲಿಗಳು ಬರುವುದು ತಡೆಯಬಹುದು ಅವು ಯಾವುವು ನೋಡಿ.
ರೋಸ್ಮರಿ: ಒಂದು ಆರೊಮ್ಯಾಟಿಕ್ ಸಸ್ಯವಾಗಿದೆ. ರೋಸ್ಮರಿ ಕೂದಲು ಆರೋಗ್ಯಕರವಾಗಿರಲು ಮತ್ತು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಇದರ ಪರಿಮಳ ಇಲಿಗಳಿಗೆ ಇಷ್ಟವಾಗುವುದಿಲ್ಲ. ಈ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸುವುದರಿಂದ ಇಲಿಗಳು ನಿಮ್ಮ ಮನೆಯ ಸಮೀಪ ಕೂಡ ಸುಳಿಯಲ್ಲ., ಡ್ಯಾಫೋಡಿಲ್ ಸಸ್ಯ: ಡ್ಯಾಫೋಡಿಲ್ ಸಸ್ಯಗಳನ್ನು ಉತ್ತರ ಯುರೋಪ್ನಲ್ಲಿ ಸ್ಥಳೀಯವಾಗಿವೆ ಮತ್ತು ಪ್ರಪಂಚದಾದ್ಯಂತ ಸಮ ಶೀತೋಷ್ಣ ಹವಾಮಾನದಲ್ಲಿ ಬೆಳೆಯಲಾಗುತ್ತದೆ. ಈ ಡ್ಯಾಫೋಡಿಲ್ ಸಸ್ಯದ ಹೂವಿನಿಂದ ಹೊರಹೊಮ್ಮುವ ವಿಷಕಾರಿ ವಾಸನೆಯು ಇಲಿಗಳು ಮನೆ ಬಳಿ ಬಾರದಂತೆ ತಡೆಯುತ್ತದೆ.
ಲ್ಯಾವೆಂಡರ್ ಗಿಡ: ಸಾಮಾನ್ಯವಾಗಿ ಮನುಷ್ಯರು ಲ್ಯಾವೆಂಡರ್ ಪರಿಮಳವನ್ನು ಇಷ್ಟಪಡುತ್ತಾರೆ. ಇದರಿಂದ ಪರಿಮಳಯುಕ್ತ ಮೇಣದ ಬತ್ತಿಗಳು ಮತ್ತು ಸಾರಭೂತ ತೈಲಗಳನ್ನು ಅದರ ಸುಗಂಧದೊಂದಿಗೆ ಬಳಸಲಾಗುತ್ತದೆ. ಆದರೆ, ಇಲಿಗಳು ಮಾತ್ರ ಈ ಲ್ಯಾವೆಂಡರ್ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಮನೆಯಲ್ಲಿ ಈ ಸಸ್ಯ ನೆಡುವುದರಿಂದ ಇಲಿಗಳ ಕಾಟಕ್ಕೆ ಮುಕ್ತಿ ಪಡೆಯಬಹುದು.
ಚೆಂಡು ಹೂವಿನ ಗಿಡ: ಚೆಂಡು ಹೂವು ಪರಿಣಾಮಕಾರಿಯಾದ ಪರಿಮಳ ಬೀರದೇ ಇದ್ದರೂ ಕೂಡ ಕೆಲವು ಸಂದರ್ಭಗಳಲ್ಲಿ ಅತೀ ಹೆಚ್ಚಾಗಿ ಈ ಚೆಂಡು ಹೂವನ್ನು ಜನರು ಬಳಸುತ್ತಾರೆ. ವಿಶೇಷವಾಗಿ ದಸರಾ, ದೀಪಾವಳಿ ಸಂದರ್ಭದಲ್ಲಿ ಜನರು ಈ ಹೂವನ್ನು ಬಳಸುತ್ತಾರೆ.ಈ ಚೆಂಡು ಹೂವು ನೋಡುವುದಕ್ಕೆ ಎಷ್ಟು ಸುಂದರವೋ, ಇಲಿಗಳನ್ನು ಓಡಿಸಲು ಅಷ್ಟೇ ಪರಿಣಾಮಕಾರಿ. ನಿಮ್ಮ ಮನೆಯ ಸಮೀಪ ಈ ಸಸ್ಯಗಳನ್ನು ನೆಟ್ಟರೆ ಚೆಂಡು ಹೂವಿನ ವಾಸನೆ ಇಲಿಗಳಿಗೆ ಹಿಡಿಸುವುದಿಲ್ಲ ಹಾಗಾಗಿ ಇಲಿಗಳು ಮನೆ ಸಮೀಪ ಸುಳಿಯುವುದಿಲ್ಲ.
ಪುದೀನಾ: ಇನ್ನೂ ಮನೆಯಲ್ಲಿ ಮಾಂಸಹಾರದ ಅಡುಗೆಯಲ್ಲಿ ಅತೀ ಹೆಚ್ಚಾಗಿ ಈ ಪುದಿನಾ ಎಲೆಗಳನ್ನು ಬಳಸಲಾಗುತ್ತದೆ. ಜನರು ಪುದಿನಾ ಎಲೆಗಳ ಪರಿಮಳವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಇಲಿಗಳು ಈ ಸುವಾಸನೆಯೂ ಇಷ್ಟವಾಗುವುದಿಲ್ಲ.