ಮನೆಯಲ್ಲಿ ಇಲಿ, ಜಿರಳೆ, ನೊಣ ಕಾಟವಿದ್ದರೆ ಪರಿಹಾರಕ್ಕಾಗಿ ಈ ಸುದ್ದಿ ಪೂರ್ತಿ ಓದಿ..
ಗೋಬಿ, ಕಬಾಬ್ ಆಯ್ತು ಇದೀಗ ಪಾನಿಪುರಿಯಲ್ಲೂ ಕ್ಯಾನ್ಸರ್ಕಾರಕ ಅಂಶಗಳು ಪತ್ತೆ..! ಶೀಘ್ರವೇ ಆಗುತ್ತಾ ಬ್ಯಾನ್..!
ಸಾಮಾನ್ಯವಾಗಿ ನಾವೆಲ್ಲರೂ ಲ್ಯಾವೆಂಡರ್ ಪರಿಮಳವನ್ನು ಇಷ್ಟಪಡುತ್ತೇವೆ. ಇದರಿಂದ ಪರಿಮಳಯುಕ್ತ ಮೇಣದ ಬತ್ತಿಗಳು ಮತ್ತು ಸಾರಭೂತ ತೈಲಗಳನ್ನು ಅದರ ಸುಗಂಧದೊಂದಿಗೆ ಬಳಸಲಾಗುತ್ತದೆ. ಆದರೆ ಇಲಿಗಳು ಲ್ಯಾವೆಂಡರ್ ವಾಸನೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಮನೆಯಲ್ಲಿ ಲ್ಯಾವೆಂಡರ್ ಗಿಡವನ್ನು ನೆಟ್ಟರೆ ಕೀಟಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಲೆಮೊನ್ಗ್ರಾಸ್ ಅಥವಾ ಸಿಟ್ರೊನೆಲ್ಲಾ ಗಿಡಗಳು ಸಾಮಾನ್ಯವಾಗಿ ಹುಲ್ಲಿನಂತೆ ಕಾಣುತ್ತವೆ. ಆದರೆ ಈ ಗಿಡ ತನ್ನ ವಿಶಿಷ್ಟವಾದ ಪರಿಮಳಕ್ಕೆ ಹೆಸರು ವಾಸಿಯಾಗಿದೆ. ಇದನ್ನು ಆಹಾರದಲ್ಲಿಯೂ ಕೆಲ ಮಂದಿ ಬಳಸುತ್ತಾರೆ. ಏಕೆಂದರೆ ಇದು ಆಹಾರಕ್ಕೆ ಪರಿಮಳ ನೀಡುವುದರೊಂದಿಗೆ ಹುಳಿ ರುಚಿಯನ್ನು ಸಹ ನೀಡುತ್ತದೆ. ಆದರೆ ಈ ಗಿಡದ ಪರಿಮಳ ಇಲಿಗಳಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಅಲ್ಲದೇ ಮನೆಯಲ್ಲಿ ಎಲ್ಲಿಯೇ ನೆಟ್ಟರೂ ಸೊಳ್ಳೆಗಳು ಕೂಡ ಮನೆಗೆ ಬರುವುದಿಲ್ಲ.
ಯೂಕಲಿಪ್ಟಸ್ ಅನ್ನು ಮನಿ ಟ್ರೀ ಎಂದು ಕರೆಯಲಾಗುತ್ತದೆ. ಇದು ಕಡಿಮೆ ಸಮಯದಲ್ಲಿ ಬಹಳ ವೇಗವಾಗಿ ಬೆಳೆಯುತ್ತದೆ. ಕೆಲವೇ ವರ್ಷಗಳಲ್ಲಿ ಬೆಳೆದು ಸುಂದರವಾಗಿ ಕಾಣುತ್ತದೆ. ಈ ಗಿಡವನ್ನು ಮಾರಾಟ ಮಾಡಿಯೂ ಹಣ ಗಳಿಸಬಹುದು. ಈ ಸಸ್ಯದ ಎಲೆಗಳು ಲಿಮೋನೆನ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ಸಹ ಇಲಿಗಳನ್ನು ಹಿಮ್ಮೆಟ್ಟಿಸುತ್ತದೆ
ಪುದೀನಾ ಎಲೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಆಹಾರದ ರುಚಿಯನ್ನು ಸುಧಾರಿಸುವುದಲ್ಲದೇ, ಆರೋಗ್ಯಕ್ಕೆ ನಾನಾ ರೀತಿ ಪ್ರಯೋಜನಕಾರಿ ಆಗಿದೆ. ಕಾರ್ಬೋಹೈಡ್ರೇಟ್ಗಳು, ಶಕ್ತಿ, ಪ್ರೋಟೀನ್ಗಳಂತಹ ಅಂಶಗಳು ಈ ಎಲೆಯಲ್ಲಿವೆ. ಆದರೆ ಮನೆಯಲ್ಲಿ ಪುದೀನಾ ಗಿಡ ನೆಟ್ಟರೆ ಕೀಟಗಳ ಕಾಟ ಕಡಿಮೆಯಾಗುತ್ತದೆ.
ಇಲಿ ಕಾಟದಿಂದ ತಪ್ಪಿಸಿಕೊಳ್ಳಲು ಟ್ರಿಕ್ಸ್: ಮನೆಯಲ್ಲಿ ಜಿರಳೆಗಳ ಕಾಟ, ಇಲಿಗಳ ಕಾಟ ಸಾಮಾನ್ಯ. ಅದರಲ್ಲೂ ಹಂಚಿನ ಮನೆಗಳಲ್ಲಿ ಇಲಿಗಳ ಕಾಟ ಹೇಳೋದೇ ಬೇಡ. ಕೆಲವರಿಗೆ ಇಲಿ ಕಂಡತರೆ ಆಗುವುದಿಲ್ಲ. ಅಂತಹವರು ಇಲಿ ನೋಡಿದ ತಕ್ಷಣ ಎದ್ದು, ಬಿದ್ದು ಕುಣಿಯುತ್ತಾರೆ. ಕೆಲವರಿಗಂತೂ ಇಲಿ, ಹೆಗ್ಗಣಗಳ ಕಾಟ ನಿಯಂತ್ರಿಸುವುದು ಬಹುದೊಡ್ಡ ಸವಾಲಾಗಿದೆ
ಇಲಿಗಳು ಮನೆಗೆ ಬರುವುದನ್ನು ತಡೆಯಲು ಮನೆಯಲ್ಲಿರುವ ರಂಧ್ರಗಳು ಮತ್ತು ಬಾಗಿಲಿನ ಕೆಳಗಿರುವ ಖಾಲಿ ಜಾಗವನ್ನು ಮುಚ್ಚುತ್ತೇವೆ. ಹೀಗಿದ್ದರೂ ಅಡುಗೆ ಮನೆಗೆ ಇಲಿಗಳು ಹೇಗೋ ಎಂಟ್ರಿ ಕೊಡುತ್ತದೆ. ಅಷ್ಟಕ್ಕೂ ಎಲ್ಲ ರೀತಿ ಮುಂಜಾಗ್ರತೆ ವಹಿಸಿದರೂ ಇಲಿ ಮನೆಗೆ ಹೇಗೆ ಬರುತ್ತೆ ಅಂತ ಯೋಚಿಸ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಏರ್ ಶಾಫ್ಟ್ : ಅಡುಗೆ ಮನೆಯಲ್ಲಿ ಇರಿಸಲಾಗಿರುವ ಶಾಫ್ಟ್ ಇಲಿಗಳ ಅಚ್ಚುಮೆಚ್ಚಿನ ಎಂಟ್ರಿ ಪಾಯಿಂಟ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕದಾಗಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ಸರಿಯಾಗಿ ಅಡುಗೆ ಮನೆಗೆ ಗಾಳಿ ಸಂಚಾರ ಸರಿಯಾಗಿ ಆಗುವುದಿಲ್ಲ. ಹೀಗಾಗಿ ಬಿಲ್ಡರ್ಗಳು ಗಾಳಿ ಬರಲೆಂದು ಏರ್ ಶಾಫ್ಟ್ಗಳನ್ನು ನಿರ್ಮಿಸುತ್ತಾರೆ. ನೀವು ಇದನ್ನು ತೆರೆದಿದ್ದರೆ, ಸುಲಭವಾಗಿ ಇಲಿಗಳು ಮನೆಯೊಳಗೆ ಪ್ರವೇಶಿಸುತ್ತದೆ.
ಕೊಳಕಿದ್ದರೆ ಇಲಿ ಬರುತ್ತೆ: ಶಾಫ್ಟ್ನಲ್ಲಿ ಕೊಳಕು ಮತ್ತು ವಾಸನೆ ಇರುತ್ತದೆ. ಈ ಸ್ಥಳದಿಂದ ಜನರು ಆಗಾಗ ಆಹಾರ ಪದಾರ್ಥಗಳು ಮತ್ತು ಕಸವನ್ನು ಎಸೆಯುತ್ತಾರೆ, ಇದರಿಂದಾಗಿ ಇಲಿಗಳು ಬರಲು ಮತ್ತು ಹೋಗಲಾರಂಭಿಸುತ್ತವೆ. ಹಾಗಾಗಿ ಶಾಫ್ಟ್ಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿ.
![](https://ainlivenews.com/wp-content/uploads/2024/01/Ad-Banner-copy-scaled.jpg)