ಹುಬ್ಬಳ್ಳಿ: ಬಡವರ ರೇಷನ್ಕಾರ್ಡ್ ರದ್ದುಗೊಳಿಸಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ. ಆದರೆ ಇಲ್ಲಿ ನೋಡಿ ಬಡವರ ಗೋಳು. ಸದ್ದಿಲ್ಲದೇ ರದ್ದಾಗುತ್ತಿವೆ ಬಡಜನರ ಹೆಸರಲ್ಲಿರೋ ರೇಷನ್ ಕಾರ್ಡ್ ಗಳು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಬಹುತೇಕ ಗ್ರಾಹಕರ ರೇಷನ್ ಕಾರ್ಡ್ ರದ್ದಾಗುತ್ತಿವೆ. ಏಕಾಏಕಿ ರೇಷನ್ಕಾರ್ಡ್ ರದ್ದಾದ ಹಿನ್ನೆಲೆ ಇಲಾಖೆಯ ಕಚೇರಿಗೆ ಆಗಮಿಸುತ್ತಿರೋ ಗ್ರಾಹಕರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮುಂದೆ ಕಣ್ಣೀರು ಹಾಕುತ್ತಿರೋ ಮಹಿಳೆಯರು. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ. ಹೌದು.. ತೆರಿಗೆದಾರರ ಹೆಸರಲ್ಲಿ ಬಹುತೇಕ ಜನರ ರೇಷನ್ ಕಾರ್ಡ್ ರದ್ದುಗೊಳಿಸಿದ ಇಲಾಖೆ, ಹುಬ್ಬಳ್ಳಿಯಲ್ಲಿಯೇ ರದ್ದಾಗಿವೆ 1200 ಕ್ಕೂ ಅಧಿಕ ರೇಷನ್ ಕಾರ್ಡ್ ಗಳು. ಬಡ ಜನರ ರೇಷನ್ ಕಾರ್ಡ್ ಗಳನ್ನೇ ಟಾರ್ಗೇಟ್ ಮಾಡಿ ಕಾರ್ಡ್ ರದ್ದು ಮಾಡುತ್ತಿದೆಯಾ ರಾಜ್ಯ ಸರ್ಕಾರ…? ಎಂಬುವಂತ ಅನುಮಾನ ದಟ್ಟವಾಗಿದೆ.
ರೈತರೇ ಗಮನಿಸಿ.. ಅಣಬೆ ಕೃಷಿ ಮಾಡುವರಿಗೆ ಶೆಡ್ ನಿರ್ಮಾಣಕ್ಕಾಗಿ ಶೇ.50 ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ
ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅನ್ನೋ ಹಾಗೆ ಅರ್ಹ ಫಲಾನುಭವಿಗಳ ಕಾರ್ಡ್ ರದ್ದುಗೊಳಿಸಿರೋ ಸರ್ಕಾರ. ಸರ್ಕಾರದ ಅನ್ನಭಾಗ್ಯವನ್ನೇ ನಂಬಿಕುಳಿತ ಬಡ ಕುಟುಂಬಗಳಿಗೆ ಸಿಡಿಲಿನಂತೆ ಬಡಿದ ಇಲಾಖೆಯ ಕಳ್ಳಾಟ. ಏಕಾಏಕಿ ರೇಷನ್ ಕಾರ್ಡ್ ರದ್ದಾದ ಹಿನ್ನೆಲೆ ಆಹಾರ ಇಲಾಖೆಗೆ ಆಗಮಿಸುತ್ತಿರೋ ಅರ್ಹ ಫಲಾನುಭವಿಗಳು, ಕಚೇರಿಗೆ ಆಗಮಿಸಿ ಕಾರ್ಡ್ ರದ್ದು ಕುರಿತು ಪರಿಶೀಲನೆ ಮಾಡುತ್ತಿದ್ದಾರೆ. ಬರಸಿಡಿಲು ಬಡೆದಂತೆ ರೇಷನ್ ಕಾರ್ಡ್ ರದ್ದು ಕುರಿತು ಅಳಲು ತೋಡಿಕೊಂಡ ಗ್ರಾಹಕರು,
ಆಹಾರ ಇಲಾಖೆ ಕಚೇರಿಗೆ ಆಗಮಿಸಿ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಸರಕಾರ ಹಾಗೂ ಇಲಾಖೆಯ ಕ್ರಮ ಕುರಿತು ಇಲಾಖೆ ಉಪ ನಿರ್ದೇಶಕರು ಹೇಳುವುದು ಹೀಗೆ. ಒಂದು ಕಡೆ ರಾಜ್ಯ ಸರ್ಕಾರ ಬಡವರ ಪಾಲಿಗೆ ಉಚಿತ ಅಕ್ಕಿ ಕೊಡುವ ಮೂಲಕ ದೀನ ದಲಿತರ ಹಿಂದುಗಳ ವರ್ಗಗಳ ಪರವಾಗಿ ಇದ್ದೇವೆ ಎಂದರೆ ಇನ್ನೊಂದು ಅದೇ ಸರಕಾರ ಆದಾಯ ತೆರಿಗೆ ನೆಪದಲ್ಲಿ ಅರ್ಹ ಫಲಾನುಭವಿಗಳ ಹೊಟ್ಟೆಗೆ ಹೊಡೆತಾ ಇದ್ದಾರೆ.